ಮಂಗಳೂರು(ಬಂಟ್ವಾಳ): ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಆದರೆ ಮಳೆ ಧಾರಾಕಾರವಾಗಿ ಸುರಿಯುವ ಮಳೆಯಿಂದಾಗಿ ಇಂದು ಬೆಳಗ್ಗೆ ಗುಡ್ಡ ಜರಿದು ಕಲ್ಲು ಬಂಡೆ ಸಹಿತ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸಾರ್ವಜನಿಕ ರಸ್ತೆ ಸಂಪೂರ್ಣ ಬಂದ್ ಆಗಿರುವ ಘಟನೆ ಲೊರೊಟ್ಟೊ ಎಂಬಲ್ಲಿ ನಡೆದಿದೆ. ಲೊರೆಟ್ಟೊ ಮಹಲ್ ತೋಟ ಎಂಬಲ್ಲಿ ರಸ್ತೆಗೆ ಬಂಡೆ ಬಿದ್ದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ.