ಮಂಗಳೂರು: ಕುತ್ತೆತ್ತೂರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಕಚೇರಿ ಬಳಿ ದುರ್ವಾಸನೆಯುಕ್ತ ರಾಸಾಯನಿಕವು ಕಳೆದ ಮಂಗಳವಾರ ರಾತ್ರಿ ಚರಂಡಿಗೆ ಸೋರಿಕೆಯಾಗಿದೆ.
ಎಮ್‌ಆರ್‌ಪಿಎಲ್ ಸಮೀಪದಲ್ಲಿಯೇ ರಾಸಾಯನಿಕ ಸೋರಿಕೆಯಾಗಿದ್ದು, ಸೋರಿಕೆಯಾದ ರಾಸಾಯನಿಕ ಅಮೋನಿಯಾ ಆಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಮಾಹಿತಿ ಸಿಗುತ್ತಲೇ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಾಸಾಯನಿಕ ಸೋರಿಕೆಯಾಗಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದೇ ಪರಿಸರದಲ್ಲಿ ಈ ಹಿಂದೆಯೂ ರಾಸಾಯನಿಕ ಸೋರಿಕೆಯಾಗಿದ್ದು, ಇದನ್ನು ಹೊರಗೆ ಹರಿಯ ಬಿಟ್ಟ ಕೈಗಾರಿಕೆ ಯಾವುದು ಎಂದು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ