ಮಂಗಳೂರು (ದೆಹಲಿ ): ಎದೆ ಮತ್ತು ಹೊಟ್ಟೆ ಸೇರಿಕೊಂಡು ಹುಟ್ಟಿದ್ದ ಸಯಾಮಿ ಅವಳಿಗಳಾದ ರೆಡ್ಡಿ ಮತ್ತು ಸಿದ್ದಿ ಎಂಬ ಒಂದು ವರ್ಷದ ಮಕ್ಕಳಿಗೆ ಹೊಸದಿಲ್ಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಸುಧೀರ್ಘ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಉತ್ತರ ಪ್ರದೇಶದ ಬರೇಲಿಯ ಮಹಿಳೆಗೆ ಅಂಪಾಲೋಪಗಸ್ ಸಯಾಮಿ ಅವಳಿಗಳಿರುವುದು ಗರ್ಭಧಾರಣೆಯ ನಾಲ್ಕನೇ ತಿಂಗಳಲ್ಲಿ ವೈದ್ಯರು ಗುರುತಿಸಿದ್ದರು. ಆ ಬಳಿಕ ಎಐಐಎಮ್ಎಸ್ ನಲ್ಲಿ ಚಿಕಿತ್ಸೆ ಪಡೆದ ಮಹಿಳೆ ಜುಲೈ ಏಳರಂದು ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಐದು ತಿಂಗಳ ಕಾಲ ಮಕ್ಕಳನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾದ ಬಳಿಕ ಮಕ್ಕಳಿಗೆ ಸುದೀರ್ಘ 9 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಬೇರ್ಪಡಿಸಲಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಅವಳಿ ಮಕ್ಕಳ ಹುಟ್ಟು ಹಬ್ಬವನ್ನು ಆಸ್ಪತ್ರೆಯಲ್ಲಿ ಆಚರಿಸಲಾಯಿತು. 2017ರಲ್ಲಿ ಒಡಿಸ್ಸಾದ ಜಗನ್ನಾಥ್ ಮತ್ತು ಬಲರಾಮ್ ಎಂಬ ಕ್ರಾನಿಯೋಪಗಸ್ ಅವಳಿಗಳಿಗೆ ಎಐಐಎಂಎಸ್ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಬೇರ್ಪಡಿಸಿದ್ದರು.