ಬೆಡೋಮ್ಸ್ ಕಪ್ಪೆ (Duttaphrynus beddomii)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಭಾರತದ ಪಶ್ಚಿಮ ಘಟ್ಟಗಳಲ್ಲಿ ಈ ಕಪ್ಪೆಗಳಿದ್ದು ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆಂದು ನಂಬಲಾಗಿದೆ. ಇವು ಹೆಚ್ಚಾಗಿ ಕುದುರೆಮುಖ, ಪೊನ್ನಮುಡಿ ಮತ್ತು ಕಾಲಕ್ಕಾದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವುಗಳ ಸಂಖ್ಯೆಯು ವಿರಳವಾಗಿದ್ದು, ಅಪಾಯದಲ್ಲಿರುವ ಪ್ರಾಣಿ ಎಂದು ಗುರುತಿಸಲಾಗಿದೆ.
ಇವು ಇರುವ ವ್ಯಾಪ್ತಿ ಪ್ರದೇಶವು 5000 ಕಿ.ಮೀ.ಗಿಂತ ಕಡಿಮೆಯಾಗಿದೆ. ಅವುಗಳ ಸಂಖ್ಯೆಯು ಕಡಿಮೆಯಾಗುತ್ತಲೇ ಇದೆ. ಉಷ್ಣವಲಯದ ಪರ್ವತದ ಮಂಜಿನ ಅರಣ್ಯಗಳಲ್ಲಿ ವಾಸಿಸುತ್ತವೆ. ಈ ಕಪ್ಪೆಗಳು ಒಂದೂಮುಕ್ಕಾಲು ಇಂಚುಗಳಷ್ಟಿರುತ್ತವೆ.
ಇವುಗಳ ಬಣ್ಣವು ಅಸ್ಪಷ್ಟ ಕಪ್ಪುಛಾಚೆಯ ಕಂದುಬಣ್ಣವು, ಕಪ್ಪು ಚುಕ್ಕೆಗಳು ಹಾಲುಗಲ್ಲುಗಳ ತುಂಡುಗಳಂತೆ ಕಡುಕೆಂಪು ಬಣ್ಣದಲ್ಲಿ ಕಾಣುತ್ತವೆ. ಹೆಚ್ಚಿನ ಮಾಹಿತಿ ದೊರೆತಿಲ್ಲ.