ಮಂಗಳೂರು:ಸಾಮಾಜಿಕ, ಧಾರ್ಮಿಕ ಉದ್ಯಮಿ, ಉಪ್ಪಳ ಕೊಡಿಬೈಲ್ ಯು.ನಾರಾಯಣ ಶೆಟ್ಟಿ(63ವರ್ಷ) ನಿಧನರಾದರು.
ದಿ.ಬೊಳ್ಳಾರು ದೂಮಣ್ಣ ಶೆಟ್ಟಿ ಹಾಗೂ ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು ಉದ್ಯಮಿಯಾಗಿ ಉಪ್ಪಳದಲ್ಲಿ ಜನಾನುರಾಗಿದ್ದರು.ಸರಳ ಮತ್ತು ಸಜ್ಜನ ವ್ಯಕ್ತಿತ್ವದ ಇವರು ಧಾರ್ಮಿಕ ಮತ್ತು ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡ ಕೊಡುಗೈ ದಾನಿಯಾಗಿದ್ದರು.
ಜು.30ರಂದು ರಾತ್ರಿ ಹತ್ತು ಗಂಟೆ ಸುಮಾರಿಗೆ ನಿಂತಲ್ಲೇ ಕುಸಿದ ಬಿದ್ದ ಪರಿಣಾಮವಾಗಿ ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆ ಸೇರಿಸಿದ್ದರು ಸಹ ತೀವ್ರವಾದ ಮೆದುಳಿನ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು.
ಇವರು ಭಾಜಪ ಮಂಜೇಶ್ವರ ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿಗಳು,ಸಾಮಾಜಿಕ ಧಾರ್ಮಿಕ ಮುಂದಾಳತ್ವದಲ್ಲಿ ಗುರುತಿಸಿಕೊಂಡು,1974 ರಿಂದಲೇ ಉಪ್ಪಳ ಪೇಟೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕ. ಸದಾ ಹಸನ್ಮುಖಿಯಾಗಿದ್ದ ಇವರು ಅದೆಷ್ಟೋ ಹಸಿದವರಿಗೆ ಅನ್ನ ನೀಡಿದವರು, ಅದೆಷ್ಟೋ ಜನರಿಗೆ ಆಪತ್ಕಾಲದಲ್ಲಿ ನೆರವು ನೀಡಿದವರು,ನೊಂದವರಿಗೆ ಸಾಂತ್ವನ ಹೇಳಿದವರು,ಒಂದು ಕಾಲದಲ್ಲಿ ಉಪ್ಪಳ ಅಂದರೆ ನಾರಾಯಣಣ್ಣ ಎಂಬ ಮಾತು ಚಿರ ಸತ್ಯ,ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎಲ್ಲಾ ಬ್ರಹ್ಮಕಲಶೋತ್ಸವ ಸಮಿತಿಯಲ್ಲಿ ಸಕ್ರಿಯರಾಗಿದ್ದ ಇವರು ಕೊಂಡೆಯೂರು ಮಠದಲ್ಲಿ ನಡೆದ ಯಾಗದ ಸಂಧರ್ಭದ ಜವಾಬ್ದಾರಿಯನ್ನು,ಅಯ್ಯಪ್ಪ ಭಜನಾ ಮಂದಿರದ ಬ್ರಹ್ಮ ಕಲಶದಲ್ಲಿ ಸಂಧರ್ಭದಲ್ಲಿ ಯಶಸ್ವಿಯಾಗಿ ಮುನ್ನಡೆಸಿದವರು. ಇವರ ಅಂತಿಮ ಸಂಸ್ಕಾರದಲ್ಲಿ ರಾಜಕೀಯ, ಧಾರ್ಮಿಕ ನಾಯಕರು ಬಂಧು ಮಿತ್ರರು ಭಾಗವಹಿಸಿ ಸಂತಾಪ ಸೂಚಿಸಿದ್ದು
ಇವರು ಧರ್ಮಪತ್ನಿ ಸುಜಾತ ಯನ್ ಶೆಟ್ಟಿ ಹಾಗೂ ಇರ್ವರು ಮಕ್ಕಳು ಮತ್ತು ಸಹೋದರ ಸಹೋದರಿಯರನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.