ಮಂಗಳೂರು (ಕೋಸ್ಟರಿಕಾ): ಕೋಸ್ಟರಿಕಾದಲ್ಲಿ 29 ವರ್ಷದ ಫುಟ್ಬಾಲ್ ಆಟಗಾರ ಜೀಸಸ್ ಆಲ್ಬರ್ಟೊ ಲೋಪೆಜ್ ಮೊಸಳೆಯೊಂದಕ್ಕೆ ಬಲಿಯಾಗಿದ್ದಾರೆ.
ಹವ್ಯಾಸಿ ಫುಟ್‌ಬಾಲ್ ಕ್ಲಬ್‌ಗಾಗಿ ಆಡುವ 29 ವರ್ಷದ ಸ್ಥಳೀಯ ಫುಟ್‌ಬಾಲ್ ಆಟಗಾರ ಕೆನಾಸ್ ನದಿಯಲ್ಲಿ ತರಬೇತಿ ಭಾಗವಾಗಿ ಈಜುತ್ತಿದ್ದ ವೇಳೆ ಮೊಸಳದಾಳಿ ಮಾಡಿದೆ. ಈಭಯಾನಕ ದೃಶ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಸ್ಥಳದಿಂದ ಓಡಿಹೋಗಿದ್ದಾರೆ. ಕೋಸ್ಟರಿಕಾ ರಾಜಧಾನಿ ಸ್ಯಾನ್ ಜೋಸ್ ನಿಂದ 140 ಮೈಲಿ ದೂರದಲ್ಲಿ ಈ ಘಟನೆ ನಡೆದಿದೆ.
ದಾಳಿ ನಂತರ ಮೊಸಳೆ ಜೀಸಸ್ ಆಲ್ಬರ್ಟೊ ದೇಹವನ್ನು ಬಾಯಿಯಿಂದ ಕಚ್ಚಿಕೊಂಡು ಎಳೆದೊಯ್ದಿದ್ದು, ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ಮೊಸಳೆಗೆ ಗುಂಡಿಕ್ಕಿ ಕೊಂದು ನಂತರ ಜೀಸಸ್ ಆಲ್ಪರ್ಟೊ ದೇಹವನ್ನು ಹೊರಕ್ಕೆ ತಂದಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Jesus Alberto Lopez Ortiz Crocodile Video | costa rican footballer crocodile | jesus chucho lopez?https://t.co/vmwIJ5dB48 pic.twitter.com/bm2bvgIPen
— HABD- Shorts (@tymon_10) August 5, 2023