ಮಕ್ಕಳಿಗಾಗಿ ವಿಶೇಷ ಸಂಚಿಕೆ
ಅನಕೊಂಡ (Eunectes murinus)
ಮಧ್ಯ ಹಾಗೂ ದ. ಅಮೇರಿಕಾದಲ್ಲಿ ಕಂಡು ಬರುವ ದೈತ್ಯಾಕಾರಿ ನೀರು ಹಾವುಗಳು. ಈ ಹಾವು ತಮ್ಮ ಬೇಟೆಯನ್ನು ಹಿಂಡಿ, ಉಸಿರುಗಟ್ಟಿಸಿ ನೀರಿನಲ್ಲಿ ಮುಳುಗಿಸಿ ಸಾಯಿಸುತ್ತದೆ. ಹಕ್ಕಿಗಳು ಸರಿಸೃಪಗಳು ಹಾಗೂ ಪ್ರಾಣಿಗಳು, ಆಮೆಗಳು ಇವುಗಳ ಆಹಾರ. ವಯಸ್ಕ ಅನಕೊಂಡಾಗಳು 5 ರಿಂದ 9 ಮೀಟರ್ (15ರಿಂದ 25 ಅಡಿ) ಉದ್ದವಿದ್ದು 100 ಕೆ.ಜಿ ತೂಕವಿರುತ್ತದೆ. ಹೊಟ್ಟೆಯ(ಮಧ್ಯ) ಭಾಗ ಮೂರು ಅಡಿ ಅಗಲವಿರುತ್ತದೆ.
ಅನಕೊಂಡಾ ಹಾವುಗಳು ಮೊಟ್ಟೆಗಳನ್ನು ಮರಿಯಾಗುವವರೆಗೂ ತನ್ನ ಒಡಲಿನಲ್ಲಿಯೇ ಜೋಪಾನ ಮಾಡಿ ಏಕಕಾಲಕ್ಕೆ 10-70 ಮರಿಗಳಿಗೆ ಜನ್ಮವೀಯುತ್ತೆ.
ಅನಕೊಂಡಾ ವಿಷಸರ್ಪ ನದಿ,ಕೆರೆಗಳ ಬಳಿ ಕಾಣ ಸಿಗುತ್ತೆ. ಅವುಗಳಿಗೆ ತೊಂದರೆಯಾದಲ್ಲಿ ಮಾತ್ರ ಕಚ್ಚುತ್ತದೆ.