ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ಮಂಗಳೂರು (ಬೆಂಗಳೂರು): ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನರಾಗಿದ್ದಾರೆ. ಬ್ಯಾಂಕಾಂಕ್‌ಗೆ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದ್ದು ಅಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪುತ್ರಿಯಾದ ಸ್ಪಂದನಾ ಅವರು 2007ರಲ್ಲಿ  ನಟ ವಿಜಯರಾಘವೇಂದ್ರ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ 19 ದಿನ ಬಾಕಿ ಇರುವಂತೆ ಈ ದುರಂತ ಸಂಭವಿಸಿದೆ.

ಸ್ಪಂದನಾ ನಿಧನದ ಬಗ್ಗೆ ನಟ ವಿಜಯರಾಘವೇಂದ್ರ ಅವರು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

LEAVE A REPLY

Please enter your comment!
Please enter your name here