ನಿಷೇಧಿತ ಎಂ ಡಿ ಎಂ ಎ ಮಾರಾಟ – ರಿಕ್ಷಾ ಚಾಲಕನ ಸೆರೆ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ಬಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಸಲ್ನನ್ನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 12 ಗ್ರಾಂ ಎಂ ಡಿ ಎಂ ಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ ವಸ್ತುವನ್ನು ಮಾರಾಟ ಮಾಡಲು ಉಪಯೋಗಿಸಿದ ಆಟೋ ರಿಕ್ಷಾ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ. ವಶಕ್ಕೆ ಪಡೆದ ಸೊತ್ತುಗಳ ಮೌಲ್ಯ 95 ಸಾವಿರ ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here