ಫೆರೆಟ್ (Mustela putorius furo)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಈ ಫೆರೆಟ್‌ಗಳಿಗೆ ಉದ್ದ ಹಾಗೂ ಸಪೂರ ದೇಹವಿರುತ್ತದೆ. ಕಂದು, ಬಿಳಿಬಣ್ಣಗಳ ಅಥವಾ ಮಿಶ್ರಬಣ್ಣದ ತುಪ್ಪಳವಿರುತ್ತದೆ. ಎರಡರಿಂದ ನಾಲ್ಕು ಪೌಂಡು ತೂಗುತ್ತವೆ. ಗಂಡುಗಳು ಹೆಣ್ಣುಗಳಿಗಿಂತ ದೊಡ್ಡದಾಗಿರುತ್ತವೆ. ಅವು 14 ರಿಂದ 18 ಗಂಟೆಗಳ ಕಾಲ ನಿದ್ರಿಸುತ್ತವೆ. ಮುಂಬೆಳಕಿನಲ್ಲಿ ಚಟುವಟಿಕೆಯಿಂದಿರುತ್ತವೆ. ಅವು ಗುಂಪಿನಲ್ಲಿ ಸಂತೋಷವಾಗಿರುತ್ತವೆ. ಒಂದು ಪ್ರದೇಶದಲ್ಲಿದ್ದು ಬಿಲದಲ್ಲಿ ನಿದ್ರೆ ಮಾಡುತ್ತವೆ. ಇವು ಮಾಂಸಾಹಾರಿ ಪ್ರಾಣಿಗಳು. ಪ್ರಾಣಿಗಳ ಮಾಂಸ, ಅವಯವ, ಮೂಳೆ, ಚರ್ಮ, ಗರಿ, ತುಪ್ಪಳ ಇದರ ಆಹಾರ. ಅವುಗಳ ಜೀರ್ಣಾಂಗವು ಚಿಕ್ಕದು. ಹೀಗಾಗಿ ಆಹಾರವನ್ನು ತಿನ್ನುವ ಪ್ರಮಾಣ ಕಡಿಮೆ. ಅವು ಪದೇ ಪದೇ ಆಹಾರವನ್ನು ಸ್ವೀಕರಿಸುತ್ತವೆ.