ಅಕ್ಕಿ ಬೆಲೆಯಲ್ಲಿ 15% ಜಿಗಿತ – ಗ್ರಾಹಕನಿಗೆ ಹೊಡೆತ

ಮಂಗಳೂರು: ಕಳೆದ ಕೆಲವು ವಾರಗಳಿಂದ ಅಕ್ಕಿ ಬೆಲೆಯು ಸರಾಸರಿ 15% ದಷ್ಟು ಏರಿಕೆ ಕಂಡಿದೆ. ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ.

ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಜುಲೈ ಎರಡನೇ ವಾರದಿಂದ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ. ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ 50 ರೂ ನಿಂದ 60 ರೂಗೆ ಏರಿಕೆಯಾಗಿದೆ. ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ಕೆ.ಜಿಗೆ ₹62 ರಿಂದ ₹64 ರೂಪಾಯಿ ಇದ್ದ ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಬೆಲೆ ₹70 ರಿಂದ ₹74 ರವರೆಗೆ ತಲುಪಿದೆ.

LEAVE A REPLY

Please enter your comment!
Please enter your name here