ಪ್ರಾಣಿ ಪ್ರಪಂಚ-63

ಗಿಬ್ಬನ್( Hylobates lar)

ಮಕ್ಕಳಿಗಾಗಿ ವಿಶೇಷ ಮಾಹಿತಿ‌

ಗಿಬ್ಬನ್‌ ದಕ್ಷಿಣ ಪೂರ್ವ ಏಶಿಯಾದ ಉಷ್ಣ ಪ್ರದೇಶದಲ್ಲಿ ದಟ್ಟಕಾಡುಗಳಲ್ಲಿ ವಾಸಿಸುತ್ತವೆ. ಇವು ಬಾಲವಿಲ್ಲದ ಚಿಂಪಾಂಜಿ, ಗೊರಿಲ್ಲಾ, ದೊಡ್ಡ ವಾನರ. ಮಾನವನನ್ನು ಹೋಲುತ್ತದೆ. ಈ ವಾನರರು ಚಿಕ್ಕ ಆಕಾರದ ಮಂಗಗಳು. ಇವು 90ಸೆಂ.ಮೀ ಉದ್ದ, ತೂಕ 7ಕೆ.ಜಿ ಇರುತ್ತವೆ. ಹೀಗಾಗಿ ಇವು ಸುಲಭವಾಗಿ ಮರದಿಂದ ಮರಕ್ಕೆ ಜಿಗಿಯಬಲ್ಲವು. ಮಂಗಗಳು ವೃಕ್ಷೋಪಜೀವಿಗಳು. ಜೀವಿತದ ಬಹು ಭಾಗವನ್ನು ಮರದ ಮೇಲೇಯೇ ಕಳೆಯುವುವು.ಇದರಿಂದ ವಾನರಗಳಿಗೆ ಆಹಾರದ ಕೊರತೆಯಿರುವುದಿಲ್ಲ. ನೆಲಕ್ಕಿಂತ ಎತ್ತರದ ಮೇಲೆ ಇರುವುದರಿಂದ ಆಹಾರವನ್ನು ಯಾರೂ ಕದಿಯಲಾರರು. ಇವು ಉಭಯಾಹಾರಗಳು. ಸಸ್ಯ, ಪ್ರಾಣಿ, ಕೀಟ, ಮೊಟ್ಟೆ, ಜೇಡ, ಚಿಕ್ಕಹಕ್ಕಿ, ಸರೀಸೃಪಗಳನ್ನು ತಿನ್ನುತ್ತವೆ. ಪಕ್ವ ಹಣ್ಣಗಳು ಅವುಗಳ ಪ್ರಿಯ ಆಹಾರವು.

LEAVE A REPLY

Please enter your comment!
Please enter your name here