ಮಂಗಳೂರು( ಬೆಂಗಳೂರು): ನಮ್ಮ ದೇಶದ ವಿಜ್ಞಾನಿಗಳ ಸಾಧನೆಯಿಂದ ಬಹಳ ಸಂತಸವಾಗುತ್ತಿದೆ. ದೂರದ ದೇಶದಿಂದ ನೇರ ಇಲ್ಲಿಗೆ ಬಂದೆ. ಸೂರ್ಯೋದಯದ ಬೆಳಕಿನಲ್ಲಿ ಬೆಂಗಳೂರಿಗರ ಮುಖ ನೋಡಿದೆ ಎಂದು ಪ್ರಧಾನಿ ನರೇದ್ರ ಮೋದಿ ಹೆಳಿದ್ದಾರೆ. ಚಂದ್ರಯಾನ-3ರ ಯಶಸ್ವಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ ಅವರು HAL ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಮೋದಿ ಮಾತು ಆರಂಭಿಸುತ್ತಿದ್ದಂತೆಯೇ ಅಬಿಮಾನಿಗಳು ಜೈ ಮೋದಿ ಘೋಷಣೆ ಕೂಗಲು ಆರಂಭಿಸಿದರು. ತಕ್ಷಣವೇ ಜನರನ್ನು ತಡೆದ ಮೋದಿ “ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್ ಜೈ ಅನುಸಂದಾನ್” ಘೋಷಣೆ ಕೂಗುವಂತೆ ಮನವಿ ಮಾಡಿದರು. ಇದರೊಂದಿಗೆ ಭಾರತ್ ಮಾತಾ ಕೀ ಜೈ ಘೋಷಣೆಯೂ ಮೊಳಗಿದವು.
ಎಕ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ…..
#WATCH | Prime Minister Narendra Modi meets ISRO chief S Somanath and other scientists of the ISRO team involved in #Chandrayaan3 Mission at ISRO Telemetry Tracking & Command Network Mission Control Complex in Bengaluru and congratulates them for the successful landing of… pic.twitter.com/D4icGMVAkP
— ANI (@ANI) August 26, 2023