ಚಂದ್ರನ ಮೇಲೆ ಲ್ಯಾಂಡರ್‌ ಇಳಿದ ಸ್ಥಳ ʼಶಿವಶಕ್ತಿʼ ಪಾಯಿಂಟ್ – ಆ. 23 ‘ಬಾಹ್ಯಾಕಾಶ ದಿನ’- ಪ್ರಧಾನಿ ಮೋದಿ

ಮಂಗಳೂರು (ಬೆಂಗಳೂರು): ಚಂದ್ರಯಾನ-3ರ ಲ್ಯಾಂಡ‌ರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು‌ ʼಶಿವಶಕ್ತಿʼ ಪಾಯಿಂಟ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದಾರೆ.

ಅವರು ನಗರದ ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಕಮಾಂಡಿಂಗ್ ಸೆಂಟರ್‌ಗೆ ಶನಿವಾರ ಬೆಳಗ್ಗೆ ಭೇಟಿನೀಡಿ ಚಂದ್ರಯಾನ-3ರ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದರು. “ನಮ್ಮ ಚಂದ್ರಯಾನ-3ರ ಲ್ಯಾಂಡ‌ರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ನಾಮಕರಣ ಮಾಡಲು ಬಯಸುತ್ತೇನೆ’ ಎಂದು ಹೇಳಿದರು. ಚಂದ್ರನ ಯಾವ ಸ್ಥಾನದಲ್ಲಿ ಚಂದ್ರಯಾನ-2 ತನ್ನ ಹೆಜ್ಜೆ ಗುರುತನ್ನು ಮೂಡಿಸಿದೆಯೋ ಆ ಸ್ಥಾನವನ್ನು ʼʼತಿರಂಗಾʼʼ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ತಿರಂಗಾ ಬಿಂದು ಭಾರತದ ಪ್ರತಿ ಪ್ರಯತ್ನಕ್ಕೆ ಪ್ರೇರಣೆಯಾಗಿರುತ್ತದೆ. ಇದು ಯಾವುದೇ ವಿಫಲತೆ ಕೊನೆಯಲ್ಲ, ಕಠಿಣ ಇಚ್ಛಾಶಕ್ತಿ ಇದ್ದರೆ ಸಫಲತೆ ಜೊತೆಗಿರುತ್ತದೆ ಎಂಬುದನ್ನು ನಮಗೆ ಕಲಿಸುತ್ತದೆ ಎಂದು ಅವರು ಹೇಳಿದರು.

ʼಚಂದ್ರಯಾನ-3 ಯಶಸ್ವಿಯಾದ ದಿನ ಆಗಸ್ಟ್‌ 23 ನ್ನು ಪ್ರತಿ ವರ್ಷ ʻರಾಷ್ಟ್ರೀಯ ಬಾಹ್ಯಾಕಾಶ ದಿನʼವಾಗಿ ಆಚರಣೆ ಮಾಡುವಂತೆʼ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಎಕ್ಸ್‌ ಗಾಗಿ ಇಲ್ಲಿ ಕ್ಲಿಕ್‌ ಮಾಡಿ….

LEAVE A REPLY

Please enter your comment!
Please enter your name here