ವೈದ್ಯನಿಗೆ ಕಾರು ಡಿಕ್ಕಿ – ಬಾನೆಟ್ ಮೇಲೆ ಬಿದ್ದ ವೈದ್ಯ -50 ಮೀಟರ್ ವರೆಗೆ ಕಾರು ಚಲಾಯಿಸಿದ ಚಾಲಕ

ಮಂಗಳೂರು(ಹರ್ಯಾಣ): ಹರ್ಯಾಣದಲ್ಲಿ ಚಾಲಕನೊಬ್ಬ ವೈದ್ಯನಿಗೆ ಕಾರು ಡಿಕ್ಕಿ ಹೊಡೆಸಿ ಬಾನೆಟ್​ ಮೇಲೆ 50 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ವೈದ್ಯರು ಟ್ಯೂಷನ್​ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೋಗಿದ್ದ ವೇಳೆ, ವೈದ್ಯರ ಕಾರಿಗೆ ಕಾರೊಂದು ಡಿಕ್ಕಿ ಹೊಡೆದಿದೆ.

ಇದನ್ನು ಪ್ರಶ್ನಿಸಲು ವೈದ್ಯರು ಕಾರಿನಿಂದ ಕೆಳಗಿಳಿದಿದ್ದ ಸಂದರ್ಭದಲ್ಲಿ ಮತ್ತೊಂದು ಕಾರಿನ ಚಾಲಕ ವೇಗವಾಗಿ ಕಾರು ಚಲಾಯಿಸಿ ವೈದ್ಯರಿಗೆ ಡಿಕ್ಕಿ ಹೊಡೆದಿದ್ದಾನೆ. ಬಾನೆಟ್​ ಮೇಲೆ ಬಿದ್ದ ವೈದ್ಯರನ್ನು ಸುಮಾರು 50 ಮೀಟರ್​ನಷ್ಟು ದೂರ ಎಳೆದೊಯ್ದಿದ್ದಾನೆ. ಡಿಕ್ಕಿ ಹೊಡೆದ ಕಾರಿನ ಚಾಲಕನನ್ನು ಮಲಿಕ್ ಎಂದು ಗುರುತಿಸಲಾಗಿದ್ದು, ಆರೋಪಿ ಚಾಲಕ ತನಗೆ ಬೆದರಿಕೆ ಹಾಕಿ ಚಾಕು ತೋರಿಸಿದ್ದಾನೆ ಎಂದು ವೈದ್ಯ ಗಗನ್ ಗಾರ್ಗ್ ಆರೋಪಿಸಿದ್ದಾರೆ. ಸ್ಥಳೀಯ ಯುವಕನೊಬ್ಬ ಘಟನೆಯ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿದ್ದು, ವಿಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here