ಪ್ರಾಣಿ ಪ್ರಪಂಚ-76

ಲಿಂಕ್ಸ್‌ (Lynx lynx)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಪ್ರಾಣಿ ಬೆಕ್ಕಿನ ತಳಿಗೆ ಸೇರಿದೆ. ಉತ್ತರ ಅಮೇರಿಕಾದ ದೊಡ್ಡ ಬೆಕ್ಕಿನ ಕುಟುಂಬಕ್ಕೆ ಸೇರಿದೆ. ಇವುಗಳಿಗೆ ಚಿಕ್ಕ ಗಿಡ್ಡ ದಪ್ಪ ಬಾಲವಿದ್ದು ಕಿವಿಯ ಮೇಲೆ ಕಪ್ಪುಕೂದಲಿನ ಕುಚ್ಚುಗಳಿವೆ. ಅಮೇರಿಕ, ಯುರೇಶಿಯಾಗಳ ದಪ್ಪ ಪೊದೆಗಳಲ್ಲಿ, ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ. ಇವು ಚಿಕ್ಕ ಸಸ್ಯಗಳು, ಹಕ್ಕಿಗಳು, ಮೀನುಗಳನ್ನು ಬೇಟೆಯಾಡುತ್ತವೆ. ನೆಲದ ಮೇಲಿರುವವಾದರೂ ಮರಗಳನ್ನು ಏರುತ್ತವೆ. ಬೇಟೆಯನ್ನು ಹಿಡಿಯಲು ನೀರಿನಲ್ಲಿ ಈಜುತ್ತವೆ. ದೊಡ್ಡ ಸಸ್ತನಿಗಳನ್ನು, ಕಡವೆಗಳನ್ನು ಹಾಗೂ ಕರಡಿಗಳನ್ನೂ ಆಗಾಗ ಬೇಟೆಯಾಡುತ್ತವೆ.

LEAVE A REPLY

Please enter your comment!
Please enter your name here