ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನ

ಮಂಗಳೂರು (ಹರಾರೆ): ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಅವರು 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಪತ್ನಿ ನಾಡಿನ್ ಇಂದು (ಸೆ.03) ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.

“ಸೆಪ್ಟೆಂಬರ್ 3, 2023 ರ ರವಿವಾರದ ಮುಂಜಾನೆ, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ ನಿಧನರಾದರು. ಅವರು ತಮ್ಮ ಕೊನೆಯ ದಿನಗಳನ್ನು ಕುಟುಂಬ ಹಾಗೂ ಅವರ ಹತ್ತಿರದ ಪ್ರೀತಿಪಾತ್ರರೊಂದಿಗೆ ಕಳೆಯಲು ಬಯಸಿದ್ದರು” ಎಂದು ಸ್ಟ್ರೀಕ್ ಅವರ ಪತ್ನಿ ನಾಡಿನ್ ಸ್ಟ್ರೀಕ್ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಕೆಲವು ವಾರಗಳ ಹಿಂದೆ, ಸ್ಟ್ರೀಕ್ ಅವರ ಮಾಜಿ ಸಹೋದ್ಯೋಗಿ ಹೆನ್ರಿ ಒಲಾಂಗಾ ಅವರು ಸ್ಟ್ರೀಕ್ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಆ ನಂತರ ಸ್ಟ್ರೀಕ್ ಮತ್ತು ಒಲಾಂಗಾ ಇಬ್ಬರೂ ಸುದ್ದಿ ಸುಳ್ಳು ಎಂದು ದೃಢಪಡಿಸಿದ್ದರು ಮತ್ತು ಒಲಾಂಗ ಅವರು ಸ್ಟ್ರೀಕ್ ಸಾವಿನ ಕುರಿತ ತಮ್ಮ ಪೋಸ್ಟ್ ಗೆ ಕ್ಷಮೆಯಾಚಿಸಿದ್ದರು.

LEAVE A REPLY

Please enter your comment!
Please enter your name here