ವಾಹನಗಳಿಗೆ HSRP ನಂಬರ್‌ಪ್ಲೇಟ್ ಅಳವಡಿಸಲು ನ.17 ಕೊನೆಯ ದಿನ-400 ರೂ. ನಿಗದಿಪಡಿಸಿದ ಕೇಂದ್ರ

ಮಂಗಳೂರು(ಬೆಂಗಳೂರು): ಮಾಲಕರು ತಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ HSRP (ಅತಿ ಸುರಕ್ಷಿತ ನೋಂದಣಿ ಫಲಕ)ಅಳವಡಿಕೆ ಮಾಡಲು ನ.17ರವರೆಗೆ ಅವಕಾಶವನ್ನು ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರತಿ ವಾಹನದ ಮಾಲಕರು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯ ಸದಸ್ಯ ಡಾ|ಕಮಲ್ಜೀತ್ ಸೋಯಿ ತಿಳಿಸಿದ್ದಾರೆ. ದೇಶದಲ್ಲಿ ಸುಮಾರು 34 ಕೋಟಿಗೂ ಹೆಚ್ಚು ನಕಲಿ ನಂಬರ್ ಪ್ಲೇಟ್ ವಾಹನಗಳು ಓಡಾಡುತ್ತಿದೆ.ಇದರಿಂದ ದೇಶದಲ್ಲಿ ಶೇ.99 ಅಪಘಾತಗಳು ನಡೆಯುತ್ತಿದೆ ಎಂದ ಅವರು, ದೇಶದಲ್ಲಿ ಒಟ್ಟು 18 ರಾಜ್ಯಗಳಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ.ಉಳಿದ ರಾಜ್ಯಗಳು ಅಳವಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ.ಅಧಿಕೃತವಾಗಿಲ್ಲದ ವಾಹನಗಳು ರಸ್ತೆಗಳಲ್ಲಿ ಓಡಾಡುವುದನ್ನು ಪತ್ತೆ ಹಚ್ಚಲು ಈ ನಂಬರ್ ಪ್ಲೇಟ್ ಅಳವಡಿಕೆಯಿಂದ ಸಹಾಯವಾಗಲಿದೆ ಎಂದರು. ಸರಕಾರ ಮತ್ತು ಮಾಧ್ಯಮಗಳಲ್ಲಿ ಈ ನಂಬರ್ ಪ್ಲೇಟ್ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು.ನಂಬರ್ ಪ್ಲೇಟ್ ಖರೀದಿಸಲು 400 ರೂ.ಗಳನ್ನು ಕೇಂದ್ರ ಸರಕಾರವು ನಿಗದಿ ಮಾಡಿದೆ. http://www.am.n/ಜಾಲತಾಣದಲ್ಲಿ ನಂಬರ್ ಪ್ಲೇಟ್ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು. ರಾಜ್ಯ ಸರಕಾರ ಈ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಮೂರು ತಿಂಗಳು ಗಡುವು ನೀಡಿದ್ದು, ಇಷ್ಟು ಕಡಿಮೆ ಸಮಯಾವಕಾಶ ಆಗುವುದಿಲ್ಲ.ಕನಿಷ್ಟ ಒಂದು ವರ್ಷದ ಅವಕಾಶವಾದರೂ ನೀಡಬೇಕು ಎಂದು ಅವರು ಮನವಿ ಮಾಡಿದರು.

LEAVE A REPLY

Please enter your comment!
Please enter your name here