ಇಂದಿನಿಂದ 5 ದಿನಗಳ ಸಂಸತ್‌ ಅಧಿವೇಶನ – ಹಳೆ ಸಂಸತ್ ಭವನಕ್ಕೆ ಭಾವನಾತ್ಮಕ ವಿದಾಯ

ಮಂಗಳೂರು(ನವದೆಹಲಿ): ಇಂದಿನಿಂದ ಐದು ದಿನಗಳ ಕಾಲ ವಿಶೇಷ ಅಧಿವೇಶನ ಪ್ರಾರಂಭವಾಗಲಿದೆ. ಇಂದಿನ ಅಧಿವೇಶನ ಸಂಸತ್ತಿನ ಹಳೆ ಕಟ್ಟದಲ್ಲಿ ನಡೆಯಲಿದ್ದು, 75 ವರ್ಷಗಳ ಹಳೆಯ ಸಂಸತ್ ಭವನಕ್ಕೆ ವಿಧಾಯ ಹೇಳುವ ಮೂಲಕ ನಾಳೆಯಿಂದ ನೂತನ ಕಟ್ಟಡಲ್ಲಿ ಅಧಿವೇಶ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರವು ಕೆಲವು ಪ್ರಮುಖ ಮಸೂದೆಗಳನ್ನು ಮಂಡಿಸಲಿದೆ.

ಹೊಸ ಕಟ್ಟಡ ಮತ್ತು ವಿಶೇಷ ಅಧಿವೇಶನದ ಆರಂಭದೊಂದಿಗೆ ಸಂಸತ್ತಿನ ಉಭಯ ಸದನಗಳ ಸಿಬ್ಬಂದಿಗೆ ಹೊಸ ಸಮವಸ್ತ್ರವೂ ಬರಲಿದೆ. ಇವರಲ್ಲಿ ಚೇಂಬರ್ ಅಟೆಂಡೆಂಟ್‌ಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಚಾಲಕರು ಮತ್ತು ಮಾರ್ಷಲ್‌ಗಳು ವಿಶೇಷ ಅಧಿವೇಶನದಲ್ಲಿ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ದಿನ ರಾಜ್ಯಸಭೆಯಲ್ಲಿ 75 ವರ್ಷಗಳ ಸಂಸದೀಯ ಪಯಣ, ಸಾಧನೆ, ಅನುಭವ ಇತ್ಯಾದಿಗಳ ಕುರಿತು ಚರ್ಚೆಯಾಗಲಿದ್ದು, ಪೋಸ್ಟ್ ಆಫೀಸ್ ಬಿಲ್, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ಇದಲ್ಲದೆ, ವಕೀಲರ ತಿದ್ದುಪಡಿ ಮಸೂದೆ-2023, ಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ-2023 ಅನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here