ವೊಂಬಟ್ (Vombatus ursinus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ವಾಮ್ ಬ್ಯಾಟ್ ಗಳು ಸಸ್ಯಾಹಾರಿಗಳು. ಹುಲ್ಲು, ಪೊದೆಗಳು, ಎಲೆ, ಮರದ ದಿಮ್ಮಿ, ಗಿಡಗಳ ಕಾಂಡಗಳು ಹಾಗೂ ಎಳುಸಾದ ಮರಗಳ ಬೇರುಗಳನ್ನು ತಿಂದು ಜೀವಿಸುತ್ತದೆ. ಸಾಕುಪ್ರಾಣಿಯಾಗಿಯೂ ಇವುಗಳನ್ನು ಮನುಷ್ಯನು ಮನೆಗಳಲ್ಲಿ ಸಾಕಬಹುದು. ಹೆಚ್ಚಾಗಿ ಕಾಡುಗಳು, ಗುಡ್ಡಗಾಡು ಪ್ರದೇಶ, ಪರ್ವತ ಪ್ರದೇಶಗಳು, ದಟ್ಟಪೊದೆಗಳಿರುವ ಪ್ರದೇಶಗಳಾದ ಕ್ವೀನ್ಸ್ ಲ್ಯಾಂಡ್, ಆಸ್ಟ್ರೇಲಿಯಾ, ಟಾಸ್ ಮಾನಿಯಾಗಳಲ್ಲಿ ಕಾಣಲಾಗಿದೆ.
ಒಂದುಮೀಟರ್ ಉದ್ದವಿರುವ ಮಾಮ್ ಬ್ಯಾಟ್ ಚಿಕ್ಕ ಮೊಂಡಾದ ಬಾಲವನ್ನು ಹೊಂದಿರುತ್ತದೆ. ಹೆಚ್ಚಾಗಿ ನಿಶಾಚರಿಯೇ ಆದ ಈ ಪ್ರಾಣಿ ಅತೀ ದೊಟ್ಟ ಬಿಲಗಳನ್ನು ಕೊರೆಯುವುದರಲ್ಲಿ ಹೆಸರುವಾಸಿ. ಏಕೆಂದರೆ ವಾಮ್ ಬ್ಯಾಟ್ ಗಳಿಗೆ ಅತ್ಯಂತ ಹರಿತವಾದ ಇಲಿ, ಹೆಗ್ಗಣಗಳಲ್ಲಿ ಇರುವಂತ ಮೊನಚಾದ ಎದುರು ಹಲ್ಲು ಹಾಗು ಬಿಲ ಕೊರೆಯಲು ಹರಿತವಾದ ಉಗುರುಗಳು ಪಂಜದಲ್ಲಿದೆ.
ಕಾಂಗರೂಗಳ ಹಾಗೆಯೇ ಮರಿಯನ್ನು ಬೆಳೆಸಿ, ಆರೈಕೆ ನೀಡಿ ರಕ್ಷಿಸಲು ತಾಯಿ ಚೀಲವಿದೆ. ಆದರೆ ಈ ಚೀಲ ಕಾಂಗರೂವಿನಲ್ಲಿರುವಂತೆ ಎದುರು ಹೊಟ್ಟೆಯ ಬಳಿ ಇಲ್ಲದೆ ಬೆನ್ನ ಮೇಲಿದೆ. ಬೆನ್ನಿನ ಮೇಲಿರುವ ಚೀಲವು ಮರಿಗೆ ರಕ್ಷಣೆ ನೀಡುತ್ತೆ. ತಾಯಿಯು ಬಿಲ ಕೊರೆಯುವಾಗ ಚೀಲದೊಳಗೆ ಮಣ್ಣು ತುಂಬಿಕೊಳ್ಳದಂತೆ ಬೆನ್ನಮೇಲೆ ಚೀಲವಿದೆ. ಮರಿಗಳು 6-7 ತಿಂಗಳು ಕಾಲ ಚೀಲದಲ್ಲಿ ಆರೈಕೆ ಪಡೆದು ನಂತರ ಹೊರಜಗತ್ತಿಗೆ ಬರುತ್ತದೆ.