ಮಂಗಳೂರು(ಹೊಸದಿಲ್ಲಿ) : ಭಾರತದಲ್ಲಿ ಅಕ್ಟೋಬರ್ 5ರಿಂದ ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಗೀತೆಯನ್ನು ಐಸಿಸಿ ಸೆ.20ರಂದು ಬಿಡುಗಡೆ ಮಾಡಿದೆ.
ಈ ಗೀತೆಯನ್ನು ದಿಲ್ ಜಶ್ನ್ ಬೋಲೆ ಎಂದು ಕರೆಯಲಾಗುತ್ತಿದ್ದು ಇದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ ಪ್ರೀತಮ್ ಈ ಗೀತೆಗೆ ಸಂಗೀತ ನೀಡಿದ್ದಾರೆ. ಗೀತೆಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಪತ್ನಿ, ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕೂಡ ಭಾಗವಹಿಸಿದ್ದಾರೆ. 3 ನಿಮಿಷ 22 ಸೆಕೆಂಡ್‌ಗಳ ಹಾಡಿಗೆ ಶ್ಲೋಕ್ ಲಾಲ್ ಹಾಗೂ ಸಾವೇರಿ ವರ್ಮಾ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಪ್ರೀತಮ್, ನಕಾಶ್ ಅಝೀಝ್, ಶ್ರೀರಾಮ ಚಂದ್ರ, ಅಮಿತ್ ಮಿಶ್ರಾ, ಜೋನಿತಾ ಗಾಂಧಿ, ಆಕಾಶ ಸಿಂಗ್ ಹಾಗೂ ಚರಣ್ ಹಾಡಿದ್ದಾರೆ.
ಕ್ರಿಕೆಟ್ ಸಂಭ್ರಮವನ್ನು ಆಚರಿಸಲು ಜಗತ್ತನ್ನು ಆಹ್ವಾನಿಸುವ ಗುರಿಯನ್ನು ಈ ಹಾಡು ಹೊಂದಿದೆ. ಕ್ರಿಕೆಟ್ ಬಗ್ಗೆ ಭಾರತದಲ್ಲಿ ಅತೀ ಹೆಚ್ಚು ಮಮಕಾರವಿದ್ದು, ಇದುವರೆಗಿನ ಅತಿದೊಡ್ಡ ವಿಶ್ವಕಪ್‌ಗಾಗಿ ದಿಲ್ ಜಶ್ನ್ ಬೋಲೆ ರಚಿಸಿರುವುದು ನನಗೆ ಅಪಾರ ಗೌರವದ ಕೆಲಸವಾಗಿದೆ. ಈ ಹಾಡು 1.4 ಶತಕೋಟಿ ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲ ಇಡೀ ಜಗತ್ತು ಭಾರತಕ್ಕೆ ಬಂದು ಇದುವರೆಗಿನ ಅತಿದೊಡ್ಡ ವಿಶ್ವಕಪ್ ನ ಭಾಗವಾಗಲು ನೆರವಾಗಲಿದೆ ಎಂದು ಸಂಗೀತ ಸಂಯೋಜಕ ಪ್ರೀತಮ್ ಹೇಳಿದ್ದಾರೆ. ಆದರೆ ಐಸಿಸಿ ಪ್ರಯತ್ನದ ಹೊರತಾಗಿಯೂ ಈ ಹಾಡಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಂದ ಆತ್ಮೀಯ ಸ್ವಾಗತ ಸಿಕ್ಕಿಲ್ಲ. 2011 ಹಾಗೂ 2015ರ ಹಿಂದಿನ ಆವೃತ್ತಿಗಳ ಗೀತೆಗಳಂತೆ ಕ್ರಿಕೆಟ್ ಅಭಿಮಾನಿಗಳ ನಾಡಿಮಿಡಿತವನ್ನು ಸೆಳೆಯಲು ಈ ಗೀತೆಗೆ ಸಾಧ್ಯವಾಗದ ಕಾರಣ ಐಸಿಸಿಯನ್ನು ಎಲ್ಲರೂ ಟೀಕಿಸಿದ್ದಾರೆ. 2011ರ ವಿಶ್ವಕಪ್ ಗೀತೆಯನ್ನು ಶಂಕರ್ ಮಹಾದೇವನ್ ಸಂಯೋಜಿಸಿದ್ದರು ಹಾಗೂ ಇದನ್ನು ದೇ ಘುಮಾಕೆ ಎಂದು ಕರೆಯಲಾಗಿತ್ತು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
DIL JASHN BOLE! #CWC23
Official Anthem arriving now on platform 2023 ??
Board the One Day Xpress and join the greatest cricket Jashn ever! ??
Credits:
Music – Pritam
Lyrics – Shloke Lal, Saaveri Verma
Singers – Pritam, Nakash Aziz, Sreerama Chandra, Amit Mishra, Jonita… pic.twitter.com/09AK5B8STG— ICC (@ICC) September 20, 2023