ದಿಲ್ಲಿ ರೈಲ್ವೆ ಹಮಾಲಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ – ಕೆಂಪು ಶರ್ಟ್, ಬ್ಯಾಡ್ಜ್ ಧರಿಸಿ ಸೂಟ್ ಕೇಸ್ ಹೊತ್ತ ಕಾಂಗ್ರೆಸ್ ನಾಯಕ

ಮಂಗಳೂರು(ಹೊಸದಿಲ್ಲಿ): ದಿಲ್ಲಿಯ ಆನಂದ್ ವಿಹಾರ್ ಐಎಸ್ ಬಿಟಿಯಲ್ಲಿ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈಲ್ವೆ ಹಮಾಲಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಆನಂದ್ ವಿಹಾರ್ ಐಎಸ್ ಬಿಟಿಯಲ್ಲಿ ಹಮಾಲಿಗಳನ್ನು ಭೇಟಿ ಮಾಡಿದ ರಾಹುಲ್‌ ಗಾಂಧಿ ಕೆಂಪು ಶರ್ಟ್ ಮತ್ತು ಬ್ಯಾಡ್ಜ್ ಧರಿಸಿದ್ದಲ್ಲದೆ, ಹೊರೆಯನ್ನೂ ಹೊತ್ತು ನಡೆದರು. ರಾಹುಲ್ ಗಾಂಧಿ ಅವರನ್ನು ನೂರಾರು ಹಮಾಲಿಗಳು ಸುತ್ತುವರಿದಿದ್ದು, ರಾಹುಲ್ ಅವರ ಈ ನಡೆಗೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here