ಚಂದ್ರನಲ್ಲಿ ಹಗಲು- ನಿದ್ರೆಗೆ ಜಾರಿದ್ದ ಪ್ರಗ್ಯಾನ್, ವಿಕ್ರಮ್ ಎಬ್ಬಿಸಲು ಮುಂದಾದ ಇಸ್ರೋ

ಮಂಗಳೂರು(ಬೆಂಗಳೂರು): ಚಂದ್ರಯಾನ-3 ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್’ಗಳನ್ನು ಎಬ್ಬಿಸುವ ಸಾಹಸಕ್ಕೆ ಇಸ್ರೋ ಮುಂದಾಗಿದೆ.

ಈ ಹಿಂದೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಅದು 14 ದಿನ ಕೆಲಸ ಮಾಡಬಹುದು ಎಂದು ಹೇಳಿತ್ತು. ಅದರಂತೆ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸಿದ್ದವು. ಚಂದ್ರನಲ್ಲಿ ಇರುಳು ಆವರಿಸಿಕೊಂಡ ಕಾರಣ  15ನೇ ದಿನ ಉಭಯ ನೌಕೆಗಳನ್ನು ನಿದ್ರೆಗೆ ಜಾರಿಸಲಾಗಿತ್ತು. ಇದೀಗ ಮತ್ತೆ ಚಂದ್ರನಲ್ಲಿ ಮುಂಜಾನೆಯಾಗುತ್ತಿದ್ದು ಇಸ್ರೋ ವಿಜ್ಞಾನಿಗಳು ನಿದ್ರೆಗೆ ಜಾರಿರುವ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್’ಗಳನ್ನು ಎಬ್ಬಿಸಲು ಹಗಲು ರಾತ್ರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಒಂದು ವೇಳೆ ಈ ಸಾಹಸದಲ್ಲಿ ಇಸ್ರೋ ವಿಜ್ಞಾನಿಗಳು ಸಫಲವಾದರೆ ಲ್ಯಾಂಡರ್ ಮತ್ತು ರೋವರ್ ಪುನಃ ಎಚ್ಚರಗೊಂಡರೆ ಮುಂದಿನ 14 ದಿನಗಳವರೆಗೆ ಕೆಲಸ ಮಾಡಬಹುದು. ಸೌರಶಕ್ತಿ ಚಾಲಿತ ಚಂದ್ರಯಾನ-3 ಮಾಡ್ಯೂಲ್ ಮಿಷನ್‌’ನ ವ್ಯಾಲಿಡಿಟಿ ಕೇವಲ ಒಂದು ಚಂದ್ರನ ದಿನವಾಗಿತ್ತು, ಅಂದರೆ ಭೂಮಿಯ ಮೇಲೆ ಸುಮಾರು 14 ದಿನಗಳಾಗಿತ್ತು. ಲ್ಯಾಂಡರ್ ಮತ್ತು ರೋವರ್ ಮತ್ತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಇಸ್ರೋ ಭರವಸೆ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here