ಸೆ.24ರಿಂದ ಚಂದನವಾಹಿನಿಯಲ್ಲಿ ‘ಅಂಬರ ಮರ್ಲೆರ್’  ತುಳು ಹಾಸ್ಯ ಧಾರಾವಾಹಿ ಪ್ರಸಾರ ಆರಂಭ

ಮಂಗಳೂರು: ಅರ್ನ ಕ್ರಿಯೇಷನ್ಸ್ ನಿರ್ಮಾಣದ ಹೊಸ ತುಳು ಸಾಮಾಜಿಕ ಹಾಸ್ಯ ಧಾರಾವಾಹಿ ‘ಅಂಬರ ಮರ್ಲೆರ್’ ದೂರದರ್ಶನದ ಚಂದನ ವಾಹಿನಿಯಲ್ಲಿ ಸೆ.24ರಿಂದ ಪ್ರಸಾರವಾಗಲಿದೆ. ಪ್ರತಿ ಭಾನುವಾರ ಮಧ್ಯಾಹ್ನ ಸಮಯ 1:30 ರಿಂದ 2 ಗಂಟೆಯವರೆಗೆ ಪ್ರಸಾರ ಕಾಣಲಿದೆ ಎಂದು ಧಾರವಾಹಿಯ ಪ್ರಧಾನ ನಿರ್ದೇಶಕ ಸುಂದರ್ ರೈ ಮಂದಾರ ಹಾಗೂ ಸಂಚಿಕೆ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂದು(ಸೆ.21) ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಧಾರಾವಾಹಿಯ 24 ಕಂತುಗಳು ಈಗಾಗಲೇ ತಯಾರಾಗಿದ್ದು, ಇದರ ಚಿತ್ರೀಕರಣ ಪುತ್ತೂರು, ಮಂಗಳೂರು ಹಾಗೂ ಕೇರಳ ರಾಜ್ಯದ ಕೆಲವು ಭಾಗಗಳಲ್ಲಿ ನಡೆದಿದೆ. ಈ ಧಾರಾವಾಹಿಯಲ್ಲಿ ತುಳು ಹಾಗೂ ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಹೆಸರಾಂತ ಹಾಸ್ಯ ಕಲಾವಿದರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಜಾ ಟಾಕೀಸ್ ನ ಗುಂಡು ಮಾಮ ಖ್ಯಾತಿಯ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್ ಸೇರಿದಂತೆ ತುಳು ನಾಟಕ ರಂಗ ಹಾಗೂ ಚಿತ್ರ ರಂಗದ ದಿಗ್ಗಜರಾದ ಸುಂದರ್ ರೈ ಮಂದಾರ, ಉಮೇಶ್ ಮಿಜಾರ್, ಅರುಣ್ ಚಂದ್ರ ಬಿ. ಸಿ ರೋಡ್, ರಾಜೇಶ್ ಮೀಯಪದವು, ರಂಜನ್ ಬೋಳೂರು, ಸೋಮನಾಥ ಶೆಟ್ಟಿ ಮಂಗಲ್ಪಾಡಿ, ರವಿ ರಾಮಕುಂಜ, ಸುನಿಲ್ ನೆಲ್ಲಿಗುಡ್ಡೆ, ರೂಪ ವರ್ಕಾಡಿ, ನಮಿತಾ ಕಿರಣ್, ಪ್ರತ್ವಿನ್ ಪೊಳಲಿ ಹಾಗೂ 75 ಕ್ಕೂ ಹೆಚ್ಚು ತುಳು ನಾಟಕ ಹಾಗೂ ಸಿನಿಮಾ ಕಲಾವಿದರು ಅಭಿನಯಿಸಿದ್ದಾರೆ.

ಈಗಾಗಲೇ ನಮ ತೆಲಿಪುಗ, ಅಂಡೆ ದುರ್ಸುಲು, ಪೂರಿಬಾಜಿ ಮುಂತಾದ ಯಶಸ್ವಿ ಹಾಸ್ಯ ಧಾರವಾಹಿಗಳನ್ನು ನೀಡಿ ಜನಮನ್ನಣೆ ಪಡೆದ ತಂಡ ಅಂಬರ ಮರ್ಲೆರ್‌ ಧಾರವಾಹಿ ನಿರ್ಮಿಸಿದ್ದು ಇದರ ತಾಂತ್ರಿಕ ತಂಡದಲ್ಲಿ ಪ್ರಸಾದನ ಪ್ರಸಾದ್ ಕೊಯಿಲ, ಕಲೆ ಹಾಗೂ ನಿರ್ಮಾಣ ನಿರ್ವಹಣೆ ವಿಜಯ್ ಮಯ್ಯ ಐಲ, ಸಹ ನಿರ್ದೇಶನ ರವಿ ಎಂ ಎಸ್ ವರ್ಕಾಡಿ, ಸಾಹಿತ್ಯ ಹಾಗೂ ಗಾಯನ ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಬೆಳಕು ಯುನಿಟ್ ರಾಜ್ ಪ್ರೊಡಕ್ಷನ್ಸ್, ಬೆಳಕು ಸಹಾಯ ಪ್ರಜ್ವಲ್ ಆಚಾರ್ಯ, ಪವನ್ ಕುಮಾರ್, ನವೀನ್, ಪ್ರಚಾರ ಕಲೆ ಗಣೇಶ್ ಕೆ, ಸಹ ಛಾಯಾಗ್ರಹಣ ಸಂಜಯ್ ನಾರಾಯಣ, ಅಶೋಕ್ ಬೇಕೂರ್, ಹಿನ್ನೆಲೆ ಸಂಗೀತ ಗುರು ಬಾಯಾರ್ ,ಮುಖ್ಯ ಛಾಯಾಗ್ರಹಣ ಹಾಗೂ ಸಂಕಲನ ಧನು ರೈ ಪುತ್ತೂರು, ಸಂಚಿಕೆ ನಿರ್ದೇಶನ ಪ್ರಜ್ವಲ್ ಕುಮಾರ್ ಅತ್ತಾವರ, ಕಥೆ, ನಿರ್ಮಾಣ, ಪ್ರಧಾನ ನಿರ್ದೇಶನದ ಜವಾಬ್ದಾರಿಯನ್ನು ಸುಂದರ್ ರೈ ಮಂದಾರ ನಿರ್ವಹಿಸಿದ್ದಾರೆ. ಈ ಧಾರಾವಾಹಿಯು ಚಂದನ ವಾಹಿನಿಯಲ್ಲಿ ಸೆಪ್ಟಂಬರ್ 24 ರಿಂದ ಪ್ರತಿ ಭಾನುವಾರ ಮಧ್ಯಾಹ್ನ 1:30 ರಿಂದ 2 ಗಂಟೆಯವರೆಗೆ ಪ್ರಸಾರವಾಗಲಿದ್ದು ವೀಕ್ಷಕ ಮಹಾಪ್ರಭುಗಳ ಸಹಕಾರವನ್ನು ಕೋರಲಾಗಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here