2 ಸಾವಿರ ರೂ. ಮುಖಬೆಲೆಯ ನೋಟು ಬದಲಾವಣೆಗೆ ಕೇವಲ 4ದಿನ ಬಾಕಿ

ಮಂಗಳೂರು(ಮುಂಬೈ): 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬಳಕೆ ಇದೇ ಸೆ.30ಕ್ಕೆ ಕೊನೆಯಾಗಲಿದೆ. ನೋಟುಗಳನ್ನು ಬ್ಯಾಂಕ್‌ ಗಳಿಗೆ ಹಿಂದಿರುಗಿಸಲು ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಉಳಿದಿವೆ. ಆರ್‌ಬಿಐ ಮೇ 23ರಂದು ಸೆ.30ರೊಳಗಾಗಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಘೋಷಿಸಿತ್ತು.

ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳನ್ನು ಸೆಪ್ಟೆಂಬರ್‌ 30ರ ಒಳಗಾಗಿ ಬ್ಯಾಂಕ್‌ ಗಳಲ್ಲಿ ಠೇವಣಿ ಇಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವಂತೆ ಆರ್‌ಬಿಐ ಸೂಚನೆ ನೀಡಿತ್ತು. 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿಯೇ ಉಳಿಯಲಿವೆ ಎಂದೂ ಆರ್‌ಬಿಐ ಈ ಹಿಂದೆಯೇ ಹೇಳಿದೆ. 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬದಲಾವಣೆಗೆ ಯಾವುದೇ ಮಿತಿಯನ್ನು ಆರ್‌ಬಿಐ ಹೇರಿಲ್ಲ. ಆದರೆ ಗ್ರಾಹಕರ ಕೆವೈಸಿ ಆಗಿರಬೇಕಾದ್ದು ಅಗತ್ಯ ಎಂದಿದೆ.

LEAVE A REPLY

Please enter your comment!
Please enter your name here