ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಚರಿತ್ರೆ ಬರೆದ ವಕೀಲೆ ಸಾರಾ ಸನ್ನಿ

ಮಂಗಳೂರು(ನವದೆಹಲಿ): ಸುಪ್ರೀಂ ಕೋರ್ಟ್ ಸೆ.25ರಂದು ವಿಶಿಷ್ಟ ವಕೀಲರ ಕಲಾಪಕ್ಕೆ ಸಾಕ್ಷಿಯಾಗಿದ್ದು, ಈ ಮೂಲಕ ಸಾರಾ ಸನ್ನಿ ಎಂಬ ವಕೀಲೆಯ ಕನಸು ಕೂಡಾ ನನಸಾಯಿತು. ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಕಿವುಡ ಮತ್ತು ಮೂಕ ವಕೀಲರೊಬ್ಬರು ಸುಪ್ರೀಂಕೋರ್ಟ್ ಗೆ ಹಾಜರಾಗಿದ್ದರು.

ಸಾರಾ ಸನ್ನಿ ಕಿವುಡ ವಕೀಲರಾಗಿ ನೋಂದಾಯಿಸಲ್ಪಟ್ಟ ಭಾರತದ ಮೊದಲ ವಕೀಲರಾಗಿದ್ದಾರೆ. ವಕೀಲೆ ಸಾರಾ ಸನ್ನಿಇಂಟರ್‌ರ್ಪ್ರಿಟರ್ ಮೂಲಕ ಸಂಜ್ಞೆ ಭಾಷೆ ಬಳಸಿ ವಾದಿಸಿದ ಪ್ರಕರಣವನ್ನು ಸೋಮವಾರ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಆಲಿಸಿತು. ವರ್ಚುವಲ್ ಪ್ರೊಸೀಡಿಂಗ್ಸ್ ನಿರ್ವಹಿಸುತ್ತಿದ್ದ ಕಂಟ್ರೋಲ್ ರೂಂ ಸಾರಾ ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡಲು ನಿರಾಕರಿಸಿತ್ತು. ಆದರೆ, ಶೀಘ್ರದಲ್ಲೇ ಅವರ ವಿಚಾರಣೆಯ ಸರದಿ ಬಂದಾಗ ಆಕೆಯ ಇಂಟರ್‌ರ್ಪ್ರಿಟರ್ ಸೌರಭ್ ರಾಯ್ ಚೌಧರಿ ಪರದೆಯ ಮೇಲೆ ಕಾಣಿಸಿಕೊಂಡರು. ಈ ವೇಳೆ ಸಿಜೆಐ ಚಂದ್ರಚೂಡ್ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿ : ಖಂಡಿತವಾಗಿ ಇಂಟರ್‌ರ್ಪ್ರಿಟರ್ ವಿಚಾರಣೆಗೆ ಸೇರಿಸಬಹುದು ತೊಂದರೆಯಿಲ್ಲ ಎಂದು ಹೇಳುವ ಮೂಲಕ ಇಂಟರ್‌ರ್ಪ್ರಿಟರ್ ಅನ್ನು ಸ್ವಾಗತಿಸಿದರು. ಚೌಧರಿ ಅವರು, ಸಾರಾ ಸನ್ನಿ ಅವರ ಸಂಕೇತ ಭಾಷೆಯನ್ನು ಅನುವಾದಿಸಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಿದರು.

ನಂತರ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡುವಂತೆ ನಿಯಂತ್ರಣ ಕೊಠಡಿ ಮತ್ತು ಇಂಟರ್ಪ್ರಿಟರ್‌ಗೆ ಸೂಚನೆ ನೀಡಿದರು. ಇದಾದ ಬಳಿಕ ಇಬ್ಬರೂ ತೆರೆ ಮೇಲೆ ಕಾಣಿಸಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದರು. ಸನ್ನಿ ಅವರು ಕಲಾಪದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಸಂಚಿತ್ ಐನ್ ಅವರು ಅರೆಂಜ್ ಮಾಡಿದ್ದರು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಇಬ್ಬರು ವಿಶೇಷ ಚೇತನ ಬಾಲಕಿಯರ ದತ್ತು ತಂದೆಯೂ ಹೌದು.ಈ ವರ್ಷದ ಆರಂಭದಲ್ಲಿ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಕೆಲಸದ ಸ್ಥಳಕ್ಕೆ ಕರೆತಂದಾಗ ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ ಮತ್ತು ಅಲ್ಲಿ ಅವರು ಏನು ಮಾಡಿದರು ಎಂಬುದನ್ನು ಅವರು ತಮ್ಮ ವಿಶೇಷ ಚೇತನ ಹೆಣ್ಣುಮಕ್ಕಳಿಗೆ ವಿವರಿಸಿದ್ದರು.

 

LEAVE A REPLY

Please enter your comment!
Please enter your name here