



ರೈತ ಮತ್ತು ಕಾರ್ಮಿಕರ ಪರ ಹೋರಾಟಗಳು 1916-1918







1916ರಲ್ಲಿ ಗಾಂಧಿ ಬಿಹಾರದ ಚಂಪಾರಣ್ಯ ಎಂಬಲ್ಲಿ ಇಂಡಿಗೋ ಚಳುವಳಿಯ ನೇತೃತ್ವ ವಹಿಸಿದರು. ಬ್ರಿಟಿಷ್ ಸರ್ಕಾರವು ಇದರಿಂದ ಕುಪಿತಗೊಂಡು ಅವರನ್ನು ಬಂಧಿಸಿ ಗಡೀಪಾರು ಮಾಡಿತು. ಜನ ಸಾಗರೋಪಾದಿಯಲ್ಲಿ ಬ್ರಿಟಿಷರ ವಿರುದ್ಧ ಘೋಷಣೆ ಹಾಕಿ ಪ್ರತಿಭಟಿಸಿದರು. ಬೃಹತ್ ಪ್ರತಿಭಟನೆಗಳಿಗೆ ಮಣಿದು ಸರ್ಕಾರವು ಗಾಂಧಿಯವರನ್ನು ಬಿಡುಗಡೆ ಮಾಡಬೇಕಾಯಿತು.




ಹಾಗೆಯೇ 1918ರಲ್ಲಿ ಗುಜರಾತ್ ನ ಖೇಡ್ ಜಿಲ್ಲೆಯಲ್ಲಿ ರೈತ ಚಳುವಳಿಯನ್ನು ಮತ್ತು ಅಹಮದಾಬಾದ್ ನಗರದಲ್ಲಿ ಕಾರ್ಮಿಕರ ಹೋರಾಟವನ್ನು ಮುನ್ನಡೆಸಿದರು. ಈ ಮೂರು ಭಾರತದಲ್ಲಿ ಗಾಂಧಿ ನಡೆಸಿದ ಬೃಹತ್ ಜನಪರ ಅಹಿಂಸಾತ್ಮಕ ಹೋರಾಟಗಳಾಗಿದ್ದವು. ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಿದ್ದ ಅಹಿಂಸಾತ್ಮಕ ಹೋರಾಟಗಳನ್ನು ಭಾರತದಲ್ಲಿ ಪ್ರಯೋಗಿಸಿ ಯಶಸ್ವಿಯಾದರು.












