ಮಂಗಳೂರು(ಮುಂಬೈ): ಪಶ್ಚಿಮ ಮುಂಬೈನ ಗೊರೆಗಾವ್ ಪ್ರದೇಶದಲ್ಲಿನ ಐದಂತಸ್ತಿನ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಏಳು ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ 46 ಮಂದಿ ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆ ಸಮಯಕ್ಕೆ ‘ಜಯ ಭವಾನಿ’ ಎನ್ನುವ ವಸತಿ ಕಟ್ಟಡದಲ್ಲಿ ಘಟನೆ ನಡೆದಿದೆ. ನೆಲ ಮಹಡಿಯವರೆಗೂ ಬೆಂಕಿ ವಿಸ್ತರಿಸಿದ್ದು ಅಂಗಡಿಗಳು, ಗುಜರಿ ವಸ್ತುಗಳು ಮತ್ತು ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. 2006ರಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ಈ ಕಟ್ಟಡ ನಿರ್ಮಿಸಲಾಗಿದ್ದು, ಅಗ್ನಿಶಾಮಕ ವ್ಯವಸ್ಥೆ ಇಲ್ಲ.
ಲಿಫ್ಟ್ ಹಳೆಯದಾಗಿತ್ತು ಹೀಗಾಗಿ ಹೊಗೆಯು ಲಿಫ್ಟ್ ಪೈಪ್ ಮೂಲಕ ಹೊರಗೆ ಹೊರಬರುತ್ತಿದೆ. ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ. ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ, ಪರಿಶೀಲನೆ ನಡೆಸಬೇಕಿದೆ ಎಂದೂ ಅವರು ತಿಳಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#BREAKING: 6 dead, 40 injured in Mumbai’s Goregaon fire
The blaze was reported at 3.05 am on Friday at the Jay Sandesh building situated near Azad Maidan in Goregaon West.#MumbaiFire #Gorogaon #GoregaonFire #Maharashtra #LeoTrailer #ENGvNZ pic.twitter.com/xF71jKCOiJ
— Vidarbha Times (@VidarbhaaTimes) October 6, 2023