ಮಂಗಳೂರು ಕೆಎಸ್ಆರ್ ಟಿಸಿಯಿಂದ ನವರಾತ್ರಿ ಸ್ಪೆಷಲ್ ಟೆಂಪಲ್ ಯಾತ್ರೆ – ದಸರಾ ದರ್ಶಿನಿ ಜೊತೆ, ಪಂಚ ದುರ್ಗಾ ದರ್ಶಿನಿ‌ ಯಾತ್ರೆ

ಮಂಗಳೂರು: ಕೆಎಸ್ಆರ್ ಟಿಸಿ ಮಂಗಳೂರು ವಿಭಾಗ ಕಳೆದ ವರ್ಷ ಆರಂಭಿಸಿದ್ದ ‘ದಸರಾ ದರ್ಶಿನಿ’ ಪ್ರವಾಸ ಪ್ಯಾಕೇಜ್‌ ಈ ಬಾರಿಯೂ ಪ್ರವಾಸಿಗರಿಗೆ ಲಭ್ಯವಾಗಲಿದೆ. ಇದರ ಜೊತೆ ಈ ಬಾರಿ ಪಂಚ ದುರ್ಗಾ ಪ್ಯಾಕೇಜ್‌ ಕೂಡಾ ಪ್ರವಾಸಿಗರಿಗೆ ಲಭ್ಯವಾಗಲಿದ್ದು, ಈ ಪ್ಯಾಕೇಜ್‌ನಡಿ ಚಿತ್ರಾಪುರ ಬೀಚ್‌ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

‘ಪಂಚದುರ್ಗಾ ದರ್ಶಿನಿ’ ಪ್ರವಾಸ ಪ್ಯಾಕೇಜ್‌ನಡಿ ತಲಪಾಡಿ ದೇವಿನಗರದ ದುರ್ಗಾಪರಮೇಶ್ವರೀ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರೀ, ಮುಂಡ್ಕೂರು ದುರ್ಗಾ ಪರಮೇಶ್ವರೀ ಹಾಗೂ ಮುಲ್ಕಿಯ ಬಪ್ಪನಾಡು ಕ್ಷೇತ್ರಕ್ಕೆ ಭೇಟಿಯ ಬಳಿಕ ಚಿತ್ರಾಪುರ ಬೀಚ್ ಗೂ ಪ್ರವಾಸಿಗರನ್ನು ಕೊಂಡೊಯ್ಯಲಾಗುವುದು. ಈ ಪ್ಯಾಕೇಜ್ ಕೆಎಸ್ಆರ್ ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಒಬ್ಬರಿಗೆ ಟಿಕೆಟ್‌ ದರ ತಲಾ 400 ರೂ. ಹಾಗೂ ಮಕ್ಕಳಿಗೆ 300 ರೂ. ದರದಲ್ಲಿ ಲಭ್ಯವಾಗಲಿದೆ ಎಂದು ಕೆಎಸ್ಆರ್ ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ತಿಳಿಸಿದ್ದಾರೆ. ಪಂಚದುರ್ಗಾ ಹಾಗೂ ದಸರಾದರ್ಶಿನಿ ಪ್ಯಾಕೇಜ್ ನಡಿ ಕೆಎಸ್ಆರ್ ಟಿಸಿ ಸಾಮಾನ್ಯ ಅಥವಾ ಎಸಿ ಬಸ್‌ ಗಳಲ್ಲಿ ಅ. 15ರಿಂದ 24ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮಂಗಳೂರಿನ ಬಿಜೈ ಕೆಎಸ್ಆರ್ ಟಿಸಿಯಿಂದ ಹೊರಟು ರಾತ್ರಿ 9ಕ್ಕೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಹಿಂತಿರುಗಲಿದೆ. ದಸರಾ ದರ್ಶನ ಜೊತೆಗೆ ಕೊಲ್ಲೂರು, ಮಾರಣಕಟ್ಟೆ, ಕಮಲಶಿಲೆ, ಉಚ್ಚಿಲ ಹಾಗೂ ಮಡಿಕೇರಿ, ಅಬ್ಬಿಫಾಲ್ಸ್, ಕುಶಾಲನಗರ ಸಂದರ್ಶಿಸುವ ಪ್ರತ್ಯೇಕ ಪ್ರವಾಸ ಪ್ಯಾಕೇಜ್ ಇರಲಿದೆ.

LEAVE A REPLY

Please enter your comment!
Please enter your name here