ಏಷ್ಯನ್ ಕ್ರೀಡಾಕೂಟದ ಪದಕದ ಪಟ್ಟಿಯಲ್ಲಿ ಭಾರತಕ್ಕೆ ನೂರು ಪದಕಗಳ ಸಂಭ್ರಮ

ಮಂಗಳೂರು(ಹಾಂಗ್‌ಝೌ): ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿಯೇ ಭಾರತ ತಂಡವು ಇದೇ ಮೊದಲ ಬಾರಿಗೆ ‘ಪದಕಗಳ ಶತಕ’ ಬಾರಿಸಿದೆ. ಕೂಟದ 14 ನೇ ದಿನವಾದ ಶನಿವಾರದ ಆರಂಭಕ್ಕೆ ಭಾರತ ತಂಡವು ಒಟ್ಟು 100 ಪದಕಗಳನ್ನು ಗಳಿಸಿದೆ.

ಫೈನಲ್ ಕಬಡ್ಡಿಯಲ್ಲಿ ತೈಪೆ ತಂಡವನ್ನು 26–25ರ ರೋಚಕ ಹಣಾಹಣಿಯಲ್ಲಿ ಮಣಿಸಿದ ಭಾರತ ಮಹಿಳೆಯರ ತಂಡ ಚಿನ್ನದ ಪದಕ ಪಡೆಯುವ ಮೂಲಕ ಶತಕದ ಪ್ರಶಸ್ತಿಗೆ ಭಾರತ ಪಾದಾರ್ಪಣೆ ಮಾಡಿತು. 2018ರಲ್ಲಿ 70 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಈ ಸಾರಿ ಭಾರತದ ಕ್ರೀಡಾಳುಗಳು 25 ಚಿನ್ನ 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳನ್ನು ಪಡೆದು ಪದಕಗಳ ಪಟ್ಟಿಯಲ್ಲಿ ಶತಕ ಬಾರಿಸಿದರು. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 100 ಪದಕಗಳನ್ನು ಗೆದ್ದಿರುವುದು ಮಹತ್ವದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಪದಕಗಳ ಪಟ್ಟಿ ಇಲ್ಲಿದೆ..

LEAVE A REPLY

Please enter your comment!
Please enter your name here