ಕೊಟ್ಟ ಭರವಸೆಯನ್ನು ಈಡೇರಿಸಿ ಜನರ ಸಮಸ್ಯೆಗಳನ್ನು ಪರಿಹರಿಸಿ – ಸಿಪಿಐ ನೇತ್ರತ್ವದಲ್ಲಿ ಜನಾಗೃಹ ಚಳುವಳಿ

ಮಂಗಳೂರು: ಕೊಟ್ಟ ಭರವಸೆಯನ್ನು ಈಡೇರಿಸಿ ಜನರ ಸಮಸ್ಯೆಗಳನ್ನು ಪರಿಹರಿಸಿ ರಾಜ್ಯ ಸರಕಾರವನ್ನು ಒತ್ತಾಯಿಸಲು ಸಿಪಿಐ ನೇತ್ರತ್ವದಲ್ಲಿ ರಾಜ್ಯವ್ಯಾಪಿ ಜನಾಗೃಹ ಚಳುವಳಿ ನಡೆಯಲಿದ್ದು ಇದರ ಭಾಗವಾಗಿ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಜನಾಗ್ರಹ ಚಳುವಳಿ ನಡೆಯಿತು.

ಎರಡೂ ಮೂರು ಸಾವಿರ ಗೌರವ ಧನ ಸಾಲುತ್ತಿಲ್ಲ, ಗ್ಯಾಸ್ ಬೆಲೆ ಏರಿಕೆ, ಸರಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ವ್ಯವಸ್ಥೆ ಇಲ್ಲ, ಇಂತಹ ಹತ್ತು ಹಲವಾರು ಸಮಸ್ಯೆಗಳಿಂದ ಅಸಂಘಟಿತ ಕಾರ್ಮಿಕ ವರ್ಗದ ಬೇಡಿಕೆಯನ್ನು ಸರಕಾರ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿ ವಿ. ಕುಕ್ಯಾನ್, ಎ.ಐ.ಟಿ.ಯು.ಸಿ ಯ ಜಿಲ್ಲಾ ಅಧ್ಯಕ್ಷರು ಎಚ್.ವಿ.ರಾವ್, ಆರ್.ಡಿ ಸೋನ್ಸ್, ಸದಾನಂದ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here