ಮಂಗಳೂರು: ನ.5ರಂದು ಮಂಗಳೂರು ಮ್ಯಾರಥಾನ್ನವರು ನಡೆಸುವ ಮ್ಯಾರಥಾನ್ ಹಾಗೂ ಅ.15ರಂದು ಸಂಜೆ ಮೊದಲ ಬಾರಿಗೆ ನಡೆಯುವಂತಹ ನೈಟ್ ಮ್ಯಾರಥಾನ್ಗೆ ಪೂರ್ವಭಾವಿಯಾಗಿ ಝ್ಯೂಸ್ ಫಿಟ್ನೆಸ್ ವತಿಯಿಂದ ಪ್ರೋಮೊ ರನ್ ನಡೆಯಿತು.
ಕಾರ್ಯಕ್ರಮಕ್ಕೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ಚಾಲನೆ ನೀಡಿದರು. ಮ್ಯಾರಾಥಾನ್ನಲ್ಲಿ ಪುರುಷರು, ಮಹಿಳೆಯರು, ಮಕ್ಕಳು, ಹಿರಿಯತು ಸೇರಿದಂತೆ ಸರಿಸುಮಾರು 250ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮಂಗಳೂರು ಮ್ಯಾರಥಾನ್, ಡೆಕಥ್ಲನ್, ಎಂಡ್ಯೂರೆನ್ಸ್ ಪೀನಟ್ ಬಟರ್ ಸಹಭಾಗಿತ್ವದಲ್ಲಿ ನಡೆದ ಪ್ರೊಮೊ ರನ್ ಕದ್ರಿ ಮಲ್ಲಿಕಟ್ಟೆಯಿಂದ ಕಂಕನಾಡಿ ಮಾರ್ಗವಾಗಿ ಜ್ಯೋತಿ ವೃತ್ತ, ಬಂಟ್ಸ್ ಹಾಸ್ಟೆಲ್ ಮುಖಾಂತರ ಕದ್ರಿ ದ್ವಾರದಿಂದ ಹಾದು ಕದ್ರಿ ಮಲ್ಲಿಕಟ್ಟೆಯಲ್ಲಿ ಸಮಪ್ತಿಗೊಂಡಿತು. ಮಂಗಳೂರು ಪೂರ್ವ ಠಾಣೆ ಹಾಗೂ ಸಂಚಾರ ಪೂರ್ವ ಠಾಣಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡಿದರು.