



ಮಂಗಳೂರು(ಉಡುಪಿ): ಉಡುಪಿಯ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಶರಣ್ ಪಂಪ್ ವೆಲ್ ಗೆ ನಿರ್ಬಂಧ ವಿಧಿಸಲಾಗಿದೆ.







ಶೌರ್ಯ ರಥಯಾತ್ರೆ ಮಂಗಳೂರಿನಿಂದ ಉಡುಪಿ ಪ್ರವೇಶಿಸಿದ್ದು ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ಬೃಹತ್ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿದೆ. ಉಡುಪಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆ ಪಂಪ್ ವೆಲ್ ವಿರುದ್ಧ ಸುಮೋಟೊ ಕೇಸ್ ದಾಖಲಾಗಿದ್ದು ಸದ್ಯ ಪಂಪ್ ವೆಲ್ ಶರತ್ತುಬದ್ದ ಜಾಮೀನಿನಲ್ಲಿದ್ದಾರೆ. ಜಾಮೀನು ನಿಯಮ ಉಲ್ಲಂಘನೆ ಅರೋಪದಡಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಗೆ ಉಡುಪಿ ಪ್ರವೇಶಿಸದಂತೆ ಪೊಲೀಸರು ತಡೆಯೊಡ್ಡಿದ್ದಾರೆ.















