ಇಸ್ರೇಲ್ ನಲ್ಲಿರುವ ಕರಾವಳಿಯ ಜನರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರಕಾರ ಮಾಡಲಿದೆ – ನಳಿನ್ ಕುಮಾರ್ ಕಟೀಲ್

ಮಂಗಳೂರು: ಇಸ್ರೇಲ್ ನಲ್ಲಿರುವ ಕರಾವಳಿಯ ಜನರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರಕಾರ ಮಾಡಲಿದೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಇಸ್ರೇಲ್ ನಲ್ಲಿ ಹಮಾಸ್ ಬಂಡುಕೋರರು ನಡೆಸಿರುವ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸುತ್ತಿದ್ದು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿಯ 5 ಸಾವಿರದಷ್ಟು ಮಂದಿ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ, ಯಾರಿಗೂ ಅಪಾಯ ಆಗದಂತೆ ಅವರಿಗೆ ರಕ್ಷಣೆ ಒದಗಿಸುತ್ತೇವೆ ಅಲ್ಲದೆ ಅವರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ನಮ್ಮ ಕೇಂದ್ರ ಸರ್ಕಾರ ಮಾಡಲಿದೆ ಎಂದು ಹೇಳಿರುವ ಕಟೀಲ್ ಕರಾವಳಿಗರ ರಕ್ಷಣೆ ಕುರಿತು ಸಚಿವ ಮುರಳೀಧರನ್ ಅವರ ಜೊತೆಗೂ ನಾನು ಮಾತನಾಡಿದ್ದೇನೆ, ದ.ಕ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಇಸ್ರೇಲ್ ವಾಸಿಗಳ ಪೂರ್ಣ ಮಾಹಿತಿ ತರಿಸಿ ಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಯುದ್ಧದ ಪರಿಸ್ಥಿತಿ ಇದ್ದಾಗ ಅವರ ಮನೆಯವರಿಗೆ ಭಯ ಇದ್ದೇ ಇರುತ್ತದೆ ರಷ್ಯಾ-ಉಕ್ರೇನ್ ಯುದ್ದ ನಡೆದ ಸಂದರ್ಭದಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಮಯದಲ್ಲಿ ಅವರ ಮನೆಗಳಿಗೆ ತೆರಳಿ ಸಮಾಧಾನ ಹೇಳಿದ್ದೆವು, ಮೋದಿ ಸರ್ಕಾರ ಆಗಲೂ ಅಲ್ಲಿದ್ದ ಭಾರತೀಯರ ರಕ್ಷಣೆ ‌ಮಾಡಿತ್ತು ಅದೇ ಕೆಲಸವನ್ನು ಈಗಲೂ ಮಾಡಲಿದೆ. ನಾನು ಎಂಬೆಸ್ಸಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ, ಯಾರೂ ಭಯ ಪಡೋ ಅಗತ್ಯ ಇಲ್ಲ, ಏನೇ ಆತಂಕ ಇದ್ದರೂ ನನ್ನನ್ನ ನೇರವಾಗಿ ಸಂಪರ್ಕಿಸಿ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here