ಪ್ರಧಾನಿ ಮೋದಿ ಬರೆದ “ಗಾರ್ಬೋ” ನವರಾತ್ರಿ ಹಾಡು ಬಿಡುಗಡೆ – ಮಿಲಿಯನ್‌ ಜನರಿಂದ ವೀಕ್ಷಣೆ

ಮಂಗಳೂರು(ಬೆಂಗಳೂರು): ಎಕ್ಸಾಂ ವಾರಿಯರ್‌ ಎಂಬ ಮಕ್ಕಳಿಗಾಗಿ ಪುಸ್ತಕ ಬರೆದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹಾಡೊಂದನ್ನು ಬರೆದಿದ್ದಾರೆ. ನವರಾತ್ರಿ ಪ್ರಾರಂಭವಾಗುವ ಮೊದಲು ಪ್ರಧಾನಿ ಮೋದಿಯವರು ಬರೆದಿರುವ ಗರ್ಬಾ ಹಾಡಿನ ವೀಡಿಯೊ ಶನಿವಾರ ಬಿಡುಗಡೆಗೊಂಡಿದೆ. ಹಲವಾರು ವರ್ಷಗಳ ಹಿಂದೆ ಪ್ರಧಾನಿ ಬರೆದಿದ್ದರು ಎನ್ನಲಾಗಿರುವ 190 ಸೆಕೆಂಡುಗಳ ಈ ಹಾಡನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಗಾರ್ಬೋ’ ಎಂಬ ಈ ಹಾಡನ್ನು ಧ್ವನಿ ಭಾನುಶಾಲಿ ಹಾಡಿದ್ದು, ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದನ್ನು ನಟ-ನಿರ್ಮಾಪಕ ಜಾಕಿ ಭಗ್ನಾನಿಯವರ ಜ್ಜಸ್ಟ್ ಮ್ಯೂಸಿಕ್ ಬ್ಯಾನರ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್‌ನಲ್ಲಿ ಈ ಹಾಡನ್ನು ಪೋಸ್ಟ್‌ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬರೆದ ಈ ಹಾಡು ಕಾವ್ಯಾತ್ಮಕತೆಯಿಂದ ಪ್ರೇರಿತವಾಗಿದೆ. ನವರಾತ್ರಿ ಸಮಯದಲ್ಲಿ ಗುಜರಾತ್‌ನ ಸಂಸ್ಕೃತಿಯನ್ನು ವೀಕ್ಷಿಸಲು ಗಾರ್ಬೋ ನಮಗೆ ಅವಕಾಶ ನೀಡಿದೆ ಎಂದು ಬರೆಯಲಾಗಿದೆ. ಬಿಡುಗಡೆಯಾದ ಆರು ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಧ್ವನಿ ಭಾನುಶಾಲಿಯವರ ಟ್ವೀಟನ್ನು ರಿಪೋಸ್ಟ್‌ ಮಾಡಿರುವ ಪ್ರಧಾನಿಯವರು ತಾವು ಇನ್ನೊಂದು ಹೊಸ ಗರ್ಬಾ ಹಾಡನ್ನು ಬರೆದಿದ್ದು, ನವರಾತ್ರಿಯ ಸಂದರ್ಭದಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here