ಟ್ರೇಡ್ ಲೈಸನ್ಸ್ ಇಲ್ಲದ ಆರೋಪ ಅಧಿಕಾರಿಗಳಿಂದ ದಾಳಿ-ಅಧಿಕಾರಿಗಳ ವರ್ತನೆ ವಿರುದ್ಧದ ಮಳಿಗೆ ಮುಖ್ಯಸ್ಥರ ಆಕ್ರೋಶ- ಶುಚಿತ್ವ ವೀಕ್ಷಿಸಿ ವಾಪಾಸಾದ ಅಧಿಕಾರಿಗಳು

ಮಂಗಳೂರು: ಅ.18ರಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಫಳ್ನೀರ್ ನಲ್ಲಿರುವ ಎಂಎಫ್ಸಿ ಮಳಿಗೆಗೆ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿ ಬೀಗ ಜಡಿಯಲು ಮುಂದಾದ ಘಟನೆ ನಡೆದಿದೆ. ಕಟ್ಟಡ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಮನಪಾ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಳಿಗೆಗೆ ಬೀಗ ಜಡಿಯಲು ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಗಳು ಮತ್ತು ಎಂಎಫ್‌ಸಿ ಮುಖ್ಯಸ್ಥ ಸಿದ್ದೀಕ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಳಿಗೆಯ ಪರಿಶೀಲನೆ ನಡೆಸಿದ ಅಧಿಕಾರಿಗಳು ನೊಟೀಸು ನೀಡಿದ 24 ಗಂಟೆಯಲ್ಲಿ ಸೂಕ್ತ ದಾಖಲೆ ಪಾಲಿಕೆಗೆ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.

ದಾಳಿಗೆ ಬಂದ ಅಧಿಕಾರಿಗಳು ವೆಲ್ಡರ್ ಮತ್ತು ಬಾಡಿಗೆ ಗೂಂಡಾಗಳೊಂದಿಗೆ ಬಂದಿದ್ದಾರೆ. ನಮ್ಮ ಮಳಿಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಿಲ್ಲ. ಟ್ರೇಡ್ ಲೈಸನ್ಸ್ ಗೆ ಈಗಾಗಲೇ ಅರ್ಜಿ ‌ಸಲ್ಲಿಸಲಾಗಿದೆ. ಆದರೆ ಇಲಾಖೆ ಅರ್ಜಿಯನ್ನು ಸ್ವೀಕಾರನೋ ಮಾಡದೆ, ತಿರಸ್ಕಾರನೂ ಮಾಡದೆ, ಮಾಹಿತಿಯನ್ನೂ ನೀಡದೆ ನಮ್ಮನ್ನು ಸತಾಯಿಸುತ್ತಿದೆ. ನಾವು ಕಳೆದ 2017 ರಿಂದ ಈ ಉದ್ಯಮ ನಡೆಸುತ್ತಿದ್ದೇವೆ. ಅಧಿಕಾರಿಗಳು ಲಂಚ ಪಡೆದು ನಮ್ಮ ಮಳಿಗೆ ಮೇಲೆ ದಾಳಿಗೆ ಬಂದಿದ್ದಾರೆ ಎಂದು ಮಳಿಗೆ ಮುಖ್ಯಸ್ಥ ಸಿದ್ದೀಕ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here