ಮಂಗಳೂರು(ಮೈಸೂರು): ಮೈಸೂರು ದಸರಾ ಪ್ರಯುಕ್ತ ನಡೆದ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಮತ್ತು ದಸರಾ ಸಿಎಂ ಕಪ್ ಸ್ಪರ್ಧೆಯಲ್ಲಿ ಪುತ್ತೂರು ತಾಲೂಕು ಇರ್ದೆ ನಿವಾಸಿ ರಜತ್ ರೈ ಪ್ರಥಮ ಸ್ಥಾನ ಗಳಿಸಿದ್ದಾರೆ.
ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ರಜತ್ ರೈ ಕಳೆದ 3 ವರ್ಷಗಳಿಂದ ಸತತವಾಗಿ ಈ ಪ್ರಶಸ್ತಿ ಗಳಿಸುತ್ತಿದ್ದಾರೆ. ಮಾಜಿ ಸೈನಿಕ ಇರ್ದೆಯ ರತ್ನಾಕರ ರೈ ಮತ್ತು ಶಶಿಕಲಾ ರೈ ಪುತ್ರನಾಗಿರುವ ಇವರು ಒಟ್ಟು 283 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ