



ಮಂಗಳೂರು(ಮಡಿಕೇರಿ): ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆ ವೇಳೆ ಮಂಟಪವೊಂದರ ಟ್ರಾಕ್ಟರ್ ಮುಗುಚಿ ಬಿದ್ದಿದ್ದು, ಮೂವರಿಗೆ ಗಾಯಗಳಾಗಿವೆ.







ಶೋಭಾಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತ್ತು. ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ನಸುಕಿನ ವೇಳೆ ಮುಗುಚಿದೆ. ಇದರಿಂದ ಮೂವರಿಗೆ ಗಾಯಗಳಾಗಿವೆ.















