



ಮಂಗಳೂರು(ಕೊಚ್ಚಿನ್): ಪಾನಮತ್ತನಾಗಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆಸಿದ ಆರೋಪದಲ್ಲಿ ‘ಜೈಲರ್’ ಚಿತ್ರದ ಪ್ರಮುಖ ನಟ ವಿನಾಯಕನ್ ಬಂಧನಕ್ಕೊಳಗಾಗಿದ್ದಾರೆ.







ಅಪಾರ್ಟ್ ಮೆಂಟ್ ನಲ್ಲಿ ಗಲಾಟೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟನಿಗೆ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಎರ್ನಾಕುಲಂ ಉತ್ತರ ಠಾಣೆಗೆ ಹಾಜರಾಗಿದ್ದ ವೇಳೆ ಠಾಣೆಯಲ್ಲಿ ಗದ್ದಲ ಎಬ್ಬಿಸಿದರು ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ತೊಂದರೆ ಉಂಟು ಮಾಡಿದ ಕಾರಣಕ್ಕಾಗಿ ನಟನನ್ನು ಬಂಧಿಸಲಾಗಿದೆ. ಅಗತ್ಯ ವೈದ್ಯಕೀಯ ತಪಾಸಣೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.















