ಮಂಗಳೂರು(ವಾಷಿಂಗ್ಟನ್): ಅ.25ರ ಸಂಜೆ ಮೈನೆಯ ಲೆವಿಸ್ಟನ್ ನಗರದಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಕನಿಷ್ಠ ಪಕ್ಷ 22 ಮಂದಿ ಮೃತಪಟ್ಟಿದ್ದು, 50ರಿಂದ60 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಗುಂಡಿನ ದಾಳಿ ನಡೆಸಿದ ಬಂದೂಕುಧಾರಿ ಇನ್ನೂ ಸೆರೆ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಬೌಲಿಂಗ್ ಹಲ್ಲೆ ಸೇರಿದಂತೆ ಸ್ಥಳೀಯ ರೆಸ್ಟೋರೆಂಟ್ ಮತ್ತು ಬಾರ್ ನಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ಸಿಟಿ ಕೌನ್ಸಿಲರ್ ರಾಬರ್ಟ್ ಮೆಕಾರ್ಥಿ ಸಿಎನ್ ಎನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಬಿಳಿ ಬಣ್ಣದ ಎಸ್ ಯುವಿ ಕಾರ್ ಮತ್ತು ಬಂಧೂಕುಧಾರಿಯ ಫೋಟೊ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಂದೂಕುಧಾರಿಯು ಕಂದು ಬಣ್ಣದ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಂದು ಬಣ್ಣದ ಶೂ ತೊಟ್ಟಿದ್ದು, ಆತನ ಗುರುತಿನ ಬಗ್ಗೆ ಮಾಹಿತಿ ಇರುವವರು ಕೂಡಲೇ ತಮ್ಮನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.