ಹಂಚು ತೆಗೆದು ಮನೆಗೆ ನುಗ್ಗಿದ ಕಾಮುಕ-ಮಧ್ಯರಾತ್ರಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ-ಮಹಿಳೆಯ ಕಿರುಚಾಟಕ್ಕೆ ಮೊಬೈಲ್‌ ಬಿಟ್ಟು ಪರಾರಿ-ಪೊಲೀಸರ ಅತಿಥಿಯಾದ ಆರೋಪಿ ನೌಫಲ್

ಮಂಗಳೂರು: ಕಾಮುಕನೊಬ್ಬ ಹಂಚು ತೆಗೆದು ಬೆಡ್ ರೂಂ ಗೆ ನುಗ್ಗಿ ಮಂಚದಡಿಯಲ್ಲಿ ಅಡಗಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರಿನ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಹರೇಕಳ ನಿವಾಸಿ ನೌಫಲ್ (38) ಎಂಬಾತನನ್ನು ಬಂಧಿಸಲಾಗಿದೆ.

ನಿನ್ನೆ ರಾತ್ರಿ ಮನೆಯೊಂದರ ಹಂಚು ತೆಗೆದು ಮನೆಯ ಬೆಡ್ ರೂಂಗೆ ನುಗ್ಗಿದ ನೌಫಲ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೆಂಚು ತೆಗೆದು ಒಳಗೆ ನುಗ್ಗಿದ ನೌಫಲ್ ಮಂಚದ ಅಡಿಯಲ್ಲಿ ಮಲಗಿದ್ದ. ರಾತ್ರಿ 10 ರ ಸುಮಾರಿಗೆ ತನ್ನ ಮಕ್ಕಳಿಬ್ಬರ ಜೊತೆ ಮಹಿಳೆ ಮಲಗಿದ್ದರು.ರಾತ್ರಿ 12.10 ರ ಸುಮಾರಿಗೆ ಮಹಿಳೆಗೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆ ಕಿರುಚುತ್ತಾ ಲೈಟ್ ಹಾಕಿದಾಗ ಮೊಬೈಲ್ ಬಿಟ್ಟು ನೌಫಲ್ ಪರಾರಿಯಾಗಿದ್ದಾನೆ. ಮೊಬೈಲ್ ಆಧಾರದ ಮೇಲೆ ಬಂದಿದ್ದು ನೌಫಲ್ ಎಂದು ಗೊತ್ತಾಗಿದೆ. ಬಳಿಕ ಆತನನ್ನು ಬಂಧಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here