ಹಾವಿನ ಬಾಯಿಗೆ ಬಾಯಿಟ್ಟು ಉಸಿರು ನೀಡಿದ ಪೊಲೀಸ್ ಅಧಿಕಾರಿ-ವಿಡಿಯೋ ವೈರಲ್-ಅಚ್ಚರಿಗೊಂಡ ನೆಟ್ಟಿಗರು

ಮಂಗಳೂರು (ಮಧ್ಯಪ್ರದೇಶ): ಮನುಷ್ಯನಿಗೆ ಹೃದಯಾಘಾತವಾದಂತಹ, ಸಮೀಪದಲ್ಲಿ ಆಸ್ಪತ್ರೆಗಳೇ ಇಲ್ಲದಂತಹ ತುರ್ತು ಸಂದರ್ಭಗಳಲ್ಲಿ ಬಾಯಿಗೆ ಬಾಯಿ ಇಟ್ಟು ಉಸಿರು ನೀಡುವ ಕುರಿತು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಪೊಲೀಸ್‌ ಅಧಿಕಾರಿ ಪ್ರಜ್ಞೆತಪ್ಪಿದ್ದ ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಿ ಪ್ರಾಣ ಉಳಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಘಟನೆ ಮಧ್ಯಪ್ರದೇಶದ ನರ್ಮದಾಪುರ ಜಿಲ್ಲೆಯ ಸೆಮಾರಿ ಹರಿಚಂದನ್‌ ನಗರದಲ್ಲಿ ನಡೆದಿದ್ದು ಉಸಿರು ನೀಡಿ ಹಾವನ್ನು ರಕ್ಷಿಸಿದ ಪೊಲೀಸ್‌ ಅಧಿಕಾರಿಯನ್ನು ಅತುಲ್‌ ಶರ್ಮಾ ಎಂದು ಗುರುತಿಸಲಾಗಿದೆ.  ಪೊಲೀಸ್‌ ಅಧಿಕಾರಿಯು ಮೊದಲು ಹಾವಿನ(rat snake) ಉಸಿರಾಟದ ಬಗ್ಗೆ ಪರೀಕ್ಷಿಸಿ, ಬಳಿಕ ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡುತ್ತಾರೆ. ಬಳಿಕ ಅದರ ತಲೆ ಮೇಲೆ ನೀರು ಹಾಕಿ, ಮತ್ತೆ ಉಸಿರು ನೀಡುತ್ತಾರೆ. ಕ್ಷಣದಲ್ಲೇ ಹಾವು ಎಚ್ಚರಗೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಅತುಲ್‌ ಶರ್ಮಾ 2008ರಿಂದ ಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ ಸುಮಾರು 500 ಹಾವುಗಳನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here