ಹಳೆಯ ದಂಡಸಂಹಿತೆಗಳ ತೆರವು – ನೂತನ ವಿಧೇಯಕಕ್ಕೆ ಒಲವು – ಶೀಘ್ರದಲ್ಲಿಯೇ ಲೋಕಸಭೆಯಲ್ಲಿ ಮಂಡನೆ – ಅಮಿತ್ ಶಾ

ಮಂಗಳೂರು(ಹೈದರಾಬಾದ್): ಭಾರತೀಯ ದಂಡಸಂಹಿತೆ, ಕ್ರಿಮಿನಲ್ ಅಪರಾಧ ಸಂಹಿತೆ ಹಾಗೂ ಸಾಕ್ಷಿ ಕಾಯ್ದೆಯನ್ನು ತೆರವುಗೊಳಿಸುವ ನೂತನ ವಿಧೇಯಕಗಳನ್ನು ಶೀಘ್ರದಲ್ಲೇ ಲೋಕಸಭೆ ಅಂಗೀಕರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಭಾರತವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಎಂದವರು ಹೇಳಿದ್ದಾರೆ. ಹೈದರಾಬಾದ್‌ನ ಸರದಾರ ವಲ್ಲಭಬಾಯ್ ಪಟೇಲ್ ರಾಷ್ಟ್ರೀಯ ಅಕಾಡಮಿಯಲ್ಲಿ ಐಪಿಎಸ್ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳ 75ನೇ ಬ್ಯಾಚ್‌ನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬ್ರಿಟಿಷ್ ಆಡಳಿತದ ಕಾಲದಲ್ಲಿ ಮಾಡಲಾದ ಕಾನೂನುಗಳನ್ನು ಭಾರತವು ತೊಡೆದುಹಾಕುತ್ತಿದೆ ಹಾಗೂ ನೂತನ ಭರವಸೆ ಹಾಗೂ ನೂತನ ಆಶಾವಾದದ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದವರು ಹೇಳಿದರು.

ನಮ್ಮ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯ ಹಿಂದಿರುವ ಚಾಲಕಶಕ್ತಿಗಳಾದ ಐಪಿಸಿ, ಸಿಆರ್‌ಪಿಸಿ ಹಾಗೂ ಸಾಕ್ಷಿ ಕಾಯ್ದೆಗಳನ್ನು 1850ರಲ್ಲಿ ರಚಿಸಲಾಗಿತ್ತು. ಇದೀಗ ಈ ಮೂರು ಕಾನೂನುಗಳಲ್ಲಿ ಕೇಂದ್ರಸರಕಾರವು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ್ದು, ಅವುಗಳ ಜಾಗದಲ್ಲಿ ಜಾರಿಗೆ ತರಲುದ್ದೇಶಿಸಿರುವ ನೂತನ ಕಾನೂನುಗಳನ್ನು ದೇಶದ ಸಂಸತ್‌ನ ಮುಂದೆ ಮಂಡಿಸಲಾಗುವುದು ಎಂದರು. ನೂತನ ಕಾನೂನಿನಲ್ಲಿ ಭಯೋತ್ಪಾದನೆ ಹಾಗೂ ಸಂಘಟಿತ ಅಪರಾಧಗಳ ಬಗ್ಗೆ ಮರು ವ್ಯಾಖ್ಯಾನವನ್ನು ಮಾಡಲಾಗಿದೆ ಹಾಗೂ ಅಂತರ್ ರಾಜ್ಯ ಗ್ಯಾಂಗ್‌ಗಳನ್ನು ನಿರ್ಮೂಲಗೊಳಿಸಲು ಹಲವಾರು ನಿಯಮಗಳನ್ನು ರೂಪಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here