ಪುತ್ತೂರಿನ 5 ಮಂದಿ ಸೇರಿದಂತೆ ಜಿಲ್ಲೆಯ 46 ಸಾಧಕರು, 17 ಸಂಘ-ಸಂಸ್ಥೆಗಳಿಗೆ ದ.ಕ. ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಡಾ.ರವೀಶ್ ಪರವ ಪಡುಮಲೆ, ಅಶೋಕ ಗೌಡ ಪಿ ಕುದ್ಮಾರು, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಕೆ.ಪಿ.ಅಹ್ಮದ್ ಹಾಜಿ ಪುತ್ತೂರು, ಕೇಶವ ಭಂಡಾರಿ ಕೋಡಿಂಬಾಡಿ, ಮನ್ಮಥ ಜೆ. ಶೆಟ್ಟಿ ಕೊಡಿಪ್ಪಾಡಿ ಸೇರಿದಂತೆ 46 ಮಂದಿಗೆ ಹಾಗೂ 17 ಸಂಘ ಸಂಸ್ಥೆಗಳಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತರ ವಿವರ ಇಂತಿವೆ….

ಸಾಹಿತ್ಯ: ಡಾ.ಪ್ರಭಾಕರ ನೀರುಮಾರ್ಗ, ಇರಾ ನೇಮು ಪೂಜಾರಿ, ಮಹೇಶ್ ಆರ್. ನಾಯಕ್, ಅರುಣಾ ನಾಗರಾಜ್ (ಸಾಹಿತ್ಯ-ಶಿಕ್ಷಣ), ಕಲೆ: ರಮೇಶ್ ಪಳನೀರು, ಎ.ಎಸ್.ದಯಾನಂದ ಕುಂತೂರು,ಜಾನಪದ: ಡಾ.ರವೀಶ್ ಪರವ ಪಡುಮಲೆ, ನಾಟಕ: ರವಿಚಂದ್ರ ಬಿ. ಸಾಲ್ಯಾನ್ ಗುಂಡೂರಿ, ಸಂಗೀತ: ಜಗದೀಶ್ ಆಚಾರ್ಯ ಶಿವಪುರ, ಎ.ಸುರೇಶ್, ಶಿಲ್ಪಕಲೆ: ಉಮೇಶ್ ಬೋಳಾರ್, ಯಕ್ಷಗಾನ: ಎಂ.ದೇವಾನಂದ ಭಟ್, ದಿನೇಶ್ ಶೆಟ್ಟಿಗಾರ್, ಭರತನಾಟ್ಯ: ಪ್ರಮೋದ್ ಉಳ್ಳಾಲ್, ಕುಣಿತ ಭಜನೆ: ಶಿಫಾಲಿ ಎನ್. ಕರ್ಕೇರ, ಸಹಕಾರ: ಚಿತ್ತರಂಜನ್ ಬೋಳಾರ್, ಕೃಷಿ: ಲಿಯೋ ಫೆರ್ನಾಂಡಿಸ್, ಕೇಶವ ಭಂಡಾರಿ, ಗಡಿನಾಡು ಕನ್ನಡಿಗ: ಅಬ್ದುಲ್ಲಾ ಮಾದುಮೂಲೆ, ಶಿಕ್ಷಣ: ಎಂ.ಎಚ್.ಮಲಾರ್, ಡಾ.ಮಂಜುನಾಥ ಎಸ್. ರೇವಣ್ಕರ್, ದೈವಾರಾಧನೆ: ಶೇಖರ ಪಂಬದ, ಮಾಧ್ಯಮ: ಇಬ್ರಾಹೀಂ ಅಡ್ಕಸ್ಥಳ, ರವಿ ಪೊಸವಣಿಕೆ, ಕ್ರೀಡೆ: ವಿಜಯ ಕಾಂಚನ್, ಜಯಪ್ಪ ಲಮಾಣಿ, ಪರಿಸರ: ಬಿ.ಎಸ್.ಹಸನಬ್ಬ, ಉದ್ಯಮ: ರೊನಾಲ್ಡ್ ಸಿಲ್ವನ್ ಡಿಸೋಜ, ಮದನ್ ರೈ, ಗ್ರಾಮೀಣಾಭಿವೃದ್ಧಿ: ಬದ್ರುದ್ದೀನ್ ಹರೇಕಳ, ಸಮಾಜ ಸೇವೆ: ಎಸ್.ಕೆ.ಶ್ರೀಪತಿ ಭಟ್, ಮುಹಮ್ಮದ್ ಇಸ್ಮಾಯೀಲ್ ಜಿ., ಶ್ವೇತಾ ಜೈನ್, ಕೆ.ಪಿ.ಅಹ್ಮದ್ ಹಾಜಿ ಪುತ್ತೂರು, ಪದ್ಮನಾಭ ನರಿಂಗಾನ, ಅಶೋಕ ಗೌಡ ಪಿ., ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಅಬ್ದುಲ್ ಕರೀಂ ಬ್ಯಾರಿ ಅಡ್ಡೂರು, ಚಂದ್ರಕಲಾ ದೀಪಕ್ ರಾವ್, ಮುಹಮ್ಮದ್ ರಫಿ, ಬಾವ ಜಾನ್ ಬೆಂಗ್ರೆ, ಡಾ.ಕೆ.ಟಿ.ವಿಶ್ವನಾಥ ಸುಳ್ಯ, ಕೊಂಕಣಿ ಸಾಹಿತ್ಯ-ಮಾಧ್ಯಮ: ಹೆನ್ರಿ ಮೆಂಡೋನ್ಸಾ, ದೈವ ನರ್ತನೆ: ಮಾಧವ ಪರವ, ಕ್ರೀಡೆ: ಅಶ್ವಲ್ ರೈ ಬೆಳ್ತಂಗಡಿ, ದೈವಾರಾಧನೆ-ಜಾನಪದ ಸಾಹಿತ್ಯ: ಮನ್ಮಥ ಜೆ. ಶೆಟ್ಟಿ

ಸಂಘ ಸಂಸ್ಥೆಗಳು/ಧಾರ್ಮಿಕ: ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ಅತ್ತಾವರ, ಕೆಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ ಕೊಡಿಯಾಲ್‌ಬೈಲ್, ಸಮಾಜ ಸೇವೆ: ಭಗಿನಿ ಸಮಾಜ-ಜೆಪ್ಪು, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ, ಕುದ್ಮಲ್ ರಂಗರಾವ್ ಸ್ಮಾರಕ ಸಂಘ-ಬಿಜೈ ಕಾಪಿಕಾಡ್, ಬ್ರದರ್ಸ್ ಯುವಕ ಮಂಡಲ-ಮೊಗವೀರ ಪಟ್ಣ, ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದೂರು, ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ) ಕೊಲ್ಯ, ಪಕ್ಕಲಡ್ಕ ಯುವಕ ಮಂಡಲ, ಯುವಕ ಮಂಡಲ (ರಿ)-ಇರಾ, ಸಾಂಸ್ಕೃತಿಕ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಚಿನ್ಮಯ ಉಜಿರೆ, ಸಹಕಾರ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ ನಿ.- ಕೋಟೆಕಾರು, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ,ಕ್ರೀಡೆ: ಯೂತ್ಸ್ ಸ್ಪೋಟ್ಸ್ ಅಕಾಡಮಿ ಉಳ್ಳಾಲ, ಸಾಂಸ್ಕೃತಿಕ: ಬರ್ಕೆ ಫ್ರೆಂಡ್ಸ್- ಅಳಕೆ, ಸಾಮಾಜಿಕ/ಶೈಕ್ಷಣಿಕ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವಕ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಕಣ್ಣೂರು, ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ.

ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಮನಪಾ ಮೇಯರ್ ಸುಧೀರ್ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಡಾ.ಮಂಜುನಾಥ್ ಭಂಡಾರಿ, ದ.ಕ. ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿ.ಪಂ. ಸಿಇಒ ಡಾ.ಆನಂದ್, ಮನಪಾ ಆಯುಕ್ತ ಆನಂದ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here