ಡಿಜಿಟಲ್ ಸಾಲ ಮಾರ್ಗಸೂಚಿಗಳನ್ನು ಅನುಸರಿಸದ ಬಜಾಜ್ ಫೈನಾನ್ಸ್-ಇ ಕಾಮ್ ಮತ್ತು ಇನ್ಸ್ಟಾ ಇಎಂಐ ಕಾರ್ಡ್ ಅಡಿಯಲ್ಲಿ ಸಾಲ ನೀಡದಂತೆ ಆರ್‌ಬಿಐ ಆದೇಶ

ಮಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಕೆಲವು ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ಎನ್ ಬಿ ಎಫ್ ಸಿ ಬಜಾಜ್ ಫೈನಾನ್ಸ್ ಸಂಸ್ಥೆಗೆ, ಅದು ಸಾಲ ನೀಡುವ ಉತ್ಪನ್ನಗಳಾದ ಇಕಾಮ್ ಮತ್ತು ಇನ್ಸ್ಟಾ ಇಎಂಐ ಕಾರ್ಡ್ ಅಡಿಯಲ್ಲಿ ಹಣ ನೀಡುವುದನ್ನು ನಿಲ್ಲಿಸುವಂತೆ ಆರ್ ಬಿ ಐ ತಿಳಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ನ.15ರಂದು ಈ ಸೂಚನೆಯನ್ನು ಆರ್ ಬಿ ಐ ನೀಡಿದೆ. ಕಂಪನಿಯು ಆರ್‌ಬಿಐನ ಡಿಜಿಟಲ್ ಸಾಲ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಆರ್ ಬಿ ಐ ಹೇಳಿದೆ.

ಈ ಎರಡು ಸ್ಕೀಮ್ ವಿಚಾರದಲ್ಲಿ ಸಂಸ್ಥೆಯು ಆರ್ ಬಿ ಐನ ಡಿಜಿಟಲ್ ಸಾಲ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ, ಈ ಎರಡು ವಿಭಾಗದಲ್ಲಿ ಸಾಲ ಪಡೆಯುವ ಗ್ರಾಹಕರಿಗೆ ಕೆಲವು ಪ್ರಮುಖ ಮಾಹಿತಿಯನ್ನು ಬಜಾಜ್ ಫೈನಾನ್ಸ್ ಸಂಸ್ಥೆ ನೀಡಿಲ್ಲ. ಇದು ಪ್ರಮುಖ ನಿಯಮ ಉಲ್ಲಂಘನೆಗಳಲ್ಲಿ ಒಂದು. ಲೋಪದೋಷಗಳನ್ನು ಸರಿಪಡಿಸಿಕೊಂಡ ಬಳಿಕ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದೂ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಟಲ್ ಸಾಲದ ಮಾರ್ಗಸೂಚಿಗಳ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಕಂಪನಿಯು ಅನುಸರಿಸದ ಕಾರಣ ಈ ಕ್ರಮ ಅಗತ್ಯವಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

LEAVE A REPLY

Please enter your comment!
Please enter your name here