ಮಂಗಳೂರು(ಕುಲು): ವಿಶ್ವದ ಪ್ರತಿಯೊಂದು ದೇಶವು ತಮ್ಮದೇ ಆದ ಆಚಾರ, ವಿಚಾರ ಸಂಸ್ಕೃತಿ ಸಂಪ್ರದಾಯವನ್ನು ಅನುಸರಿಸುತ್ತದೆ. ಹಲವು ವೈವಿಧ್ಯಮಯ ಸಂಸ್ಕೃತಿಗಳ ತವರೂರಾಗಿರುವ ಭಾರತದಲ್ಲಿ ಹೆಚ್ಚಿನ ಜನರು ತಮ್ಮ ಪೂರ್ವಜರು ಅನುಸರಿಸಿಕೊಂಡು ಬಂದ ಪದ್ದತಿಯನ್ನು ಮುಂದುವರಿಸುತ್ತಿದ್ದಾರೆ. ನಮ್ಮನ್ನು ಅಚ್ಚರಿಗೊಳಿಸುವ ಕೆಲವೊಂದು ಆಚಾರಗಳು ಭಾರತದ ಮಣ್ಣಿನಲ್ಲಿ ಇಂದಿಗೂ ನಡೆಯುತ್ತಿದೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪಿಣಿ ಗ್ರಾಮದ ಜನರು ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಗ್ರಾಮದ ಮಹಿಳೆಯರು ಪ್ರತಿವರ್ಷ 5 ದಿನಗಳ ಕಾಲ ಬೆತ್ತಲಾಗಿರುತ್ತಾರೆ ಎಂಬುವುದೇ ಈ ಸಂಪ್ರದಾಯದ ವಿಶೇಷ.
ಪ್ರತಿವರ್ಷ ಶ್ರಾವಣ ಮಾಸದ 5 ದಿನಗಳ ಕಾಲ ಇಲ್ಲಿನ ಎಲ್ಲಾ ಮಹಿಳೆಯರು ಬಟ್ಟೆ ಇಲ್ಲದೆ ಬರೇ ಚುನ್ನಿಗಳನ್ನು ಬಳಸುತ್ತಾರೆ. ಮನೆಯಿಂದ ಹೊರಗೆ ಬಾರದೇ 5 ದಿನವೂ ಮನೆಯೊಳಗಿದ್ದು ಕಾಲಕಳೆಯುವ ಇವರು ಪತಿಯೊಂದಿಗೂ ಈ ಅವಧಿಯಲ್ಲಿ ಮಾತನಾಡುವುದಿಲ್ಲ. ಮಾತ್ರವಲ್ಲ ಅವರ ನಡುವೆ ಯಾವುದೇ ದೈಹಿಕ ಸಂಪರ್ಕವೂ ಇರುವುದಿಲ್ಲ. ಈ ಅವಧಿಯಲ್ಲಿ ಪುರುಷರಿಗೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗುತ್ತದೆ. ಮಧು ಮಾಂಸವನ್ನು ತ್ಯಜಿಸಿ ಇರಬೇಕಾದ ಈ ಸಂಪ್ರದಾಯ ಹಿಂದೆ ಒಂದು ಕತೆಯೂ ಇದೆ. ಹಿಂದೆ ಪಿಣಿ ಗ್ರಾಮದಲ್ಲಿ ದೆವ್ವಗಳು ಮನುಷ್ಯನ ರೂಪದಲ್ಲಿ ಓಡಾಡುತ್ತಿದ್ದು ಗ್ರಾಮದ ಮಹಿಳೆಯರ ಬಟ್ಟೆಗಳನ್ನು ಹರಿದು ಹಾಕುತ್ತಿದ್ದವಂತೆ. ಲಹುವಾ ಘೋಂಡ್ ದೇವತೆಯು ತಮ್ಮ ರಕ್ಷಣೆಗಾಗಿ ಗ್ರಾಮಕ್ಕೆ ಬಂದು ಆ ರಾಕ್ಷಸರನ್ನು ಕೊಂದಳು ಎಂದು ಗ್ರಾಮದ ಜನ ಇಂದಿಗೂ ನಂಬುತ್ತಾರೆ. ಅಂದಿನಿಂದ ಇಂದಿನ ವರೆಗೆ ಗ್ರಾಮದ ಜನರು ಪ್ರತಿವರ್ಷ ಶ್ರಾವಣ ಮಾಸದ 5 ದಿನಗಳ ಕಾಲ ಸಂಪ್ರದಾಯ ಬದ್ದವಾಗಿ ಮಹಿಳೆಯರು ಬಟ್ಟೆ ಇಲ್ಲದೆ ಮತ್ತು ಕೆಲವರು ಚಿಕ್ಕ ಚುನ್ನಿ ಧರಿಸಿ ಕಾಲ ಕಳೆಯುತ್ತಾರೆ. ಈಗಿನ ಯುವಕರು ಈ ವಿಚಿತ್ರ ಸಂಪ್ರದಾಯದತ್ತ ಗಮನ ಹರಿಸುತ್ತಿಲ್ಲ ಎನ್ನುವ ವಿಷಾದವೂ ಗ್ರಾಮಸ್ಥರಿಗಿದೆ.