ವಿಶಾಖಪಟ್ಟಣಂ ಅಗ್ನಿ ದುರಂತ-25ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಭಸ್ಮ

ಮಂಗಳೂರು(ವಿಶಾಖಪಟ್ಟಣಂ): ವಿಶಾಖಪಟ್ಟಣಂ ಬಂದರಿನಲ್ಲಿ ನ.19ರಂದು ರಾತ್ರಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 25 ಮೀನುಗಾರಿಕಾ ದೋಣಿಗಳು ಭಸ್ಮವಾಗಿವೆ. ಈ ಆಘಾತಕಾರಿ ಘಟನೆಯಿಂದ ಸುಮಾರು 30 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕೆಲ ಕಿಡಿಗೇಡಿಗಳು ದೋಣಿಗಳಿಗೆ ಬೆಂಕಿ ಹಚ್ಚಿರಬೇಕು ಎನ್ನುವುದು ಮೀನುಗಾರರ ಶಂಕೆ. ದೋಣಿಯಲ್ಲಿ ಪಾರ್ಟಿ ಮಾಡುತ್ತಿದ್ದುದು ದುರಂತಕ್ಕೆ ಕಾರಣವಾಗಿರಬೇಕು ಎಂಬ ಅನುಮಾನವೂ ವ್ಯಕ್ತವಾಗಿದೆ. ಕೆಲ ದೋಣಿಗಳಲ್ಲಿ ಸ್ಫೋಟ ಸಂಭವಿಸಿ, ಇಂಧನ ಟ್ಯಾಂಕ್‍ಗಳಿಗೆ ಕೂಡಾ ಬೆಂಕಿ ಹತ್ತಿಕೊಂಡಿತು. ದೋಣಿಗಳಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳು ಸ್ಫೋಟಕ್ಕೆ ಕಾರಣವಾಗಿತ್ತು. ತಮ್ಮ ಜೀವನಾಧಾರವಾಗಿರುವ ದೋಣಿಗಳು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ಮೀನುಗಾರರು ಅಸಹಾಯಕರಾಗಿ ನೋಡುತ್ತಿರುವಂತೆಯೇ 25 ದೋಣಿಗಳು ಸುಟ್ಟುಕರಕಲಾಗಿದೆ. ರಾತ್ರಿ 11.30ರ ಸುಮಾರಿಗೆ ದುರಂತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ ರೆಡ್ಡಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ನಿರಂತರ ಪ್ರಯತ್ನ ಮಾಡಿದ್ದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here