



ಮಂಗಳೂರು(ಕಾಸರಗೋಡು): ಪೈಪ್‌ಲೈನ್‌ಗಾಗಿ ಅಗೆಯುವ ವೇಳೆ ಗೋಡೆ ಕುಸಿದು ಕಲ್ಲಿನ ಕೆಳಗೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ನ.21ರ ಸಂಜೆ ನಡೆದಿದೆ.







ಕಾಸರಗೋಡು ಮಾರ್ಕೆಟ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಅಗೆಯುವ ವೇಳೆ ಕಲ್ಲಿನ ಗೋಡೆ ಕುಸಿದಿದೆ. ಕಲ್ಲಿನ ಕೆಳಗಡೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಮೃತರನ್ನು ಕರ್ನಾಟಕ ಮೂಲದ ಲಕ್ಷ್ಮಪ್ಪ (43) ಮತ್ತು ಬಿಎಂ ಬಸಯ್ಯ (40) ಎಂದು ಗುರುತಿಸಲಾಗಿದೆ.















