ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದಲ್ಲಿ ಕಿನ್ನಿಗೋಳಿಯ ಯುವತಿ-ತಂಡದ ಕೇರ್‌ ಟೇಕರ್‌ ಆಗಿರುವ ಉರ್ಮಿಳಾ ರೊಸಾರಿಯೋ

ಮಂಗಳೂರು: ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಜಯಶಾಲಿಯಾಗುವುದರೊಂದಿಗೆ ಆಸೀಸ್ ತಂಡದ ಹಿಂದಿರುವ ಸ್ತ್ರೀಯೊಬ್ಬರ ಹೆಸರು ಮುನ್ನೆಲೆಗೆ ಬಂದಿದೆ. ಕರಾವಳಿಯ ಮಂಗಳೂರು ಮೂಲದ 34 ವರ್ಷದ  ಉರ್ಮಿಳಾ ರೊಸಾರಿಯೋ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆಸ್ಟ್ರೇಲಿಯಾದ ಗೆಲುವಿನೊಂದಿಗೆ ಉರ್ಮಿಳಾ ಹೆಸರು ಮುನ್ನೆಲೆಗೆ ಬಂದಿದೆ.

ಉರ್ಮಿಳಾ ರೊಸಾರಿಯೋ ಮೂಲತಃ ಮಂಗಳೂರಿನ ಕಿನ್ನಿಗೋಳಿಯವರಾಗಿದ್ದು ಐವಿ ಮತ್ತು ವಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿಯಾಗಿದ್ದಾರೆ. ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ಕೇರ್ ಟೇಕರ್ ಆಗಿದ್ದಾರೆ. ಉರ್ಮಿಳಾ ರೊಸಾರಿಯೋ ಹೆತ್ತವರು ಮೂಲತಃ ಕಿನ್ನಿಗೋಳಿಯವರಾಗಿದ್ದರೂ, ಉದ್ಯೋಗದ ನಿಮಿತ್ತ ಕತಾರ್‌ನ ದೋಹಾದಲ್ಲಿ ವಾಸ್ತವ್ಯವಾಗಿದ್ದರು. ಉರ್ಮಿಳಾ ಕತಾರ್‌ನಲ್ಲಿಯೇ ಜನಿಸಿದ್ದು, ಬಾಲ್ಯದಿಂದಲೇ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದರು. ಈ ಹಿಂದೆ ಉರ್ಮಿಳಾ, ಕತಾರ್ ಟೆನ್ನಿಸ್ ಫೆಡರೇಶನ್‌ನಲ್ಲಿ ಕಾರ್ಯನಿರ್ವಹಿಸಿದ್ದು, ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಟೇಲ್ ಕ್ರಿಕೆಟ್ ತಂಡದಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.  ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಕತಾರ್‌ನಲ್ಲಿ ನಡೆದ ವಿಶ್ವ ಫುಟ್ಬಾಲ್ ವೇಳೆ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ್ದ ಉರ್ಮಿಳಾ ಅಪಾರ ಅನುಭವದೊಂದಿಗೆ ಮತ್ತೆ ಆಸ್ಟ್ರೇಲಿಯಾಕ್ಕೆ ಮರಳಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ವಿಶ್ವಕಪ್ ನಿರ್ವಹಣೆಗಾಗಿ ಪುರುಷರ ತಂಡದೊಂದಿಗಿದ್ದ ಉರ್ಮಿಳಾ, ಶೀಘ್ರದಲ್ಲೇ ಮಹಿಳಾ ಕ್ರಿಕೆಟ್ ತಂಡವನ್ನು ಸೇರಲಿದ್ದಾರೆ ಮತ್ತು ಅವರೊಂದಿಗೆ ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಉರ್ಮಿಳಾ ರೊಸಾರಿಯೋ ಅವರ ಹೆತ್ತವರು ಕಳೆದ ಏಳು ವರ್ಷದಿಂದ ಸಕಲೇಶಪುರದಲ್ಲಿ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here