ಕೊಡಗಿನಲ್ಲಿ ಕಾಡಾನೆಗಳ ಹಾವಳಿ-ಮನೆಯಂಗಳದಲ್ಲಿ ವಾಕಿಂಗ್‌ ಮಾಡುತ್ತಿರುವ ಕಾಡಾನೆಗಳು-ಎಚ್ಚರದಿಂದಿರುವಂತೆ ಅಧಿಕಾರಿಗಳ ಸೂಚನೆ-ಶಾಶ್ವತ ಪರಿಹಾರಕ್ಕೆ ಸ್ಥಳೀಯರ ಆಗ್ರಹ

ಮಂಗಳೂರು(ಮಡಿಕೇರಿ): ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳ ಹಿಂಡು ಕಾಡಿನಿಂದ ನಾಡಿಗೆ ಬಂದು ತೋಟಕ್ಕೆ, ತೋಟದಿಂದ ಮನೆಯಂಗಳಕ್ಕೆ ಬಂದು ಉಪಟಳ ನೀಡಲು ಆರಂಭಿಸಿದೆ.

ತಾಲೂಕಿನ ಬೇಟೋಳ್ಳಿ ಗ್ರಾಮದಲ್ಲಿ ಸುಮಾರು ನಾಲ್ಕು ಕಾಡಾನೆಗಳು ಕಾಣಿಸಿಕೊಂಡಿದ್ದು, ಕಳೆದ ಮೂರು ದಿನಗಳಿಂದ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದೆ. ಮಾತ್ರವಲ್ಲ ಸ್ಥಳೀಯ ಡಿ.ಎಚ್.ಎಸ್ ಮಿಲ್ ಆವರಣದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ನಿಲ್ಲಿಸಿದ್ದ ಕಾರುಗಳ ಪಕ್ಕದಲ್ಲೇ ಸ್ವಲ್ಪ ಹೊತ್ತು ಅಡ್ಡಾಡಿದ ಎರಡು ಕಾಡಾನೆಗಳು ಯಾವುದೇ ಹಾನಿ ಮಾಡದೆ ಮರಳಿದೆ. ಆನೆಗಳ ಹಿಂಡು ಇಲ್ಲಿನ ಶ್ರೀಭದ್ರಕಾಳಿ ದೇವಸ್ಥಾನದ ಸಮೀಪದಲ್ಲೇ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನದಲ್ಲಿದ್ದಾರೆ. ಕಾಡಾನೆ ಹಾವಳಿ ತಡೆಗೆ ಸರ್ಕಾರ ಶಾಶ್ವತ ಪರಿಹಾರ ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here